ಪ್ರೇಮಿ
ಬಣ್ಣದ ಲೋಕದ ಬುಗುರಿಯಲಿ
ತಿರುಗುತ ಲಿರುವೇನು ನಾನಿಲ್ಲಿ
ಭೂತ ಭವಿಷ್ಯದ ಪರಿವೆ ಇಲ್ಲದೆ
ಕುಳಿತಿರುವೆ ನೋಡು ಮರೆತಿಲ್ಲಿ //
ಚಿನ್ನದ ಮಾತುಗಳು ಇನ್ನೆಲ್ಲಿ
ಕಣ್ಣಿಗೆ ಕಾಣದೆ ನೀ ಇಲ್ಲೇಲ್ಲು
ಬಡ ಬಡಿಸುತಿರುವೆ ನಾನಿಲ್ಲಿ
ಕೆಳಿಸದೇನೋ ನೀನಗಲ್ಲಿ //
ಪ್ರೇಮಿಗಳ ದಿನ ಇನ್ನೆಲ್ಲಿ
ಮಧುರ ಮಾತು ಮರೆತಿಲ್ಲ
ನೆನಪಿಸುತ್ತಿರುವೆ ನಾನಿಲ್ಲಿ
ಕನವರಿಸುತಿರುವೆ ಕೇಳಿಲ್ಲಿ //
ನೆನಪಿನ ಕಾಣಿಕೆ ಕಾಣದಾಯ್ತೆ
ಕುಣಿಯುವ ಕಾಲು ನಿಂತೊಯ್ತು
ಕಣ್ಣಿಗೆ ಕತ್ತಲೆಯು ಕಾವಿದಾಯ್ತು
ನೀ ಬರದೆನ್ಮನ ಬರಿದಾಯ್ತು //
ಬಂತೆ ಬಂತು ನೋಡು ಆದಿನ
ಗುಲಾಬಿ ಕೊಟ್ಟ ಕ್ಷಣದ ದಿನ
ಪ್ರೀತಿಸುವ ಆಸೆಯೂ ಚಿಗಿತ
ಆ ಮಧುರ ಗಳಿಗೆಯ ದಿನ //
ಕಲ್ಮೇಶ ಬಡಿಗೇರ
9743539657
........ಬಾದಾಮಿ.......
- Kalmesh Badiger
04 Oct 2020, 09:09 am
Download App from Playstore: