ಹೆಣ್ಣು ನಮ್ಮ ದೇಶದ ಕಣ್ಣು

ಬೆದರಿ ಹೆದರಿ ಬದುಕಿಯದು ಸಾಕು ಹೆಣ್ಣೆ... ಆತ್ಮವಿಶ್ವಾಸದ ಧೈರ್ಯದಿಂದ ಮುಂದೆ ಬಾ... ಮುಗ್ದ ಮಗುವಿನ ಹಾಗೆ ಪ್ರತಿ ಹೆಣ್ಣಿನ ಮನಸು... ಆತ್ಮೀಯರಿಗೆ ಸೇವೆ ಮಾಡುವದೇ ಇವರ ಕನಸ್ಸು.. ಪ್ರೀತಿಸಿವುದೇ ಹೆಣ್ಣಿನ ಗುಣ...... ಮನೆತನ ಕಾಪಾಡುವದೇ ಇವರ ಋಣ.... ತಾಳ್ಮೆಯಿಂದ ಇದ್ದರೆ ತಂಗಾಳಿ... ಕೋಪದಿಂದ ಇದ್ದರೆ ಸುಂಟರಗಾಳಿ.. ಪ್ರತಿಯೊಂದು ಪ್ರಯತ್ನವನ್ನು ನಂಬಿಕೆಯಿಂದ ಇಡು. ಸಾವಿರಾರು ದಾರಿಗಳು ಕಾಣುತ್ತದೆ. ನಿಮ್ಮ ಅಹಂಕಾರ ಕೋಪವನ್ನು ಸ್ವಲ್ಪ ಕಡಿಮೆಗೊಳಿಸಿದರೆ ಎಲ್ಲರ ಪ್ರೀತಿ ಒಲವು ಸಿಗುತ್ತದೆ... ನಿಮ್ಮ ಕಣ್ಣೀರಿನ ಚಿಂತೆಗಳನ್ನು ಮರೆತು ನಗು ನಗುತ ಇದ್ದರೆ ಬದುಕು ಸಂತೋಷವಾಗುತ್ತದೆ.. ಎಲ್ಲ ನನ್ನ ಹಣೆಬರಹ ಎಂದು ಕೊರಗುವುದಕ್ಕಿಂತ ನನ್ನ ಬಾಳೋ ಜೀವನವೇ ಸ್ವರ್ಗವೆಂದು ಸ್ವೀಕರಿಸು.. ಧೈರ್ಯದಿಂದ ಎಲ್ಲ ಸಂಕಟಗಳನ್ನು ಎದುರಿಸಿ ಗೆಲುವನ್ನು ಸ್ವಾಗತಿಸು... ಹೆಣ್ಣು ಎಂದಿಗೂ ಹೊನ್ನು... ಹೆಣ್ಣು ದೇಶದ ಕಣ್ಣು

- mahendran h

04 Oct 2020, 03:55 pm
Download App from Playstore: