ಭೂರಮೆ
ನಮ್ಮ ಪೋರೇವ ನಮ್ಮ ತಾಯಿ
ಭೂಮಿ ತಾಯಿ ನಿನಗೆ ಶರಣು
ಹಸಿರು ಹೊದ್ದು ಉಸಿರು ನೀಡ್ವ
ಭೂರಮೆ ಮಾತೆ ನಿನಗೆ ನಮೋ //
ಬಿರು ಬಿಸಿಲು ತಡೆದು ಜಗಕೆ
ತಂಪು ಗಾಳಿ ಬೀಸುವ ವೃಕ್ಷಗಳೆ
ಹಸಿರು ಹುಲ್ಲು ಹೊಸತು ಮಾತು
ಜೀವದಾರೆಯಾದ ಮರಗಳೆ //
ಸಕಲ ಜೀವಿಗಳಿಗೆ ಸಲುಹಿದ
ಮನುಜ ಕುಲವ ಬೇಳೆಸಿದಂತಾ
ಸದಾ ನಗುತಾ ಉಲ್ಲಾಸದಿಂದ
ನಿಂತ ತಾಯೆ ಭೂರಮೆಗೆ ಜೈ //
ನೀರು ನೆರಳು ಹಸಿರು ಉಸಿರು
ನಿಂದಾ ಭೂಮಿಯೋಂದು ಸುಂದರ
ಪ್ರಕೃತಿಯ ಮಡಿಲಿನಲ್ಲಿ ವೃಕ್ಷಮಾತೆ
ಎಷ್ಟು ಸುಂದರ ಅತಿ ಸುಂದರ //
ಕಾಲಿ ಕಾಲಿ ಬೆಂಚು ಕಾಡಿನಲ್ಲಿ
ಕೊರೆವ ಬಿಸಿಲು ನೆತ್ತಿಮೇಲೆ
ಮುತ್ತನಿಯುತ ಮದ್ಯದಲ್ಲಿ ನಿಂತ
ಮುದ್ದು ಮರಗಿಡಗಳೆ ಸುಂದರ //
ಕಲ್ಮೇಶ ಬಡಿಗೇರ
9743539657
........ಬಾದಾಮಿ......
- Kalmesh Badiger
04 Oct 2020, 08:10 pm
Download App from Playstore: