ರಾಕ್ಷಸರಿಹರು ಎಚ್ಚರ

ಕ್ರೂರ ರಾಕ್ಷಸರಿಹರು ಎಚ್ಚರ
ಇವರ ಮಾತಿಗೆ ಮರುಳಾದ್ರೆ
ಮನೆ ಭೂದಿ ಮಾಡುವರೋ
ಎಚ್ಚರ ತಂಗೆಮ್ಮರ ಎಚ್ಚರ //

ಇವರು ಹಾಕಿಕೊಳ್ಳು ವಂತಹ
ಅತ್ತಾರ ಚಿತ್ತಾರ ಬಟ್ಟೆಗಳ ಕಂಡು
ಸೇಂಟ್ ಸೋಕಿಗಳ ವಾಸನಿಗೆ
ಮಾರುಹೋದರೆ ತಂಗಿ ಎಚ್ಚರ //

ತಂಗಿ ಯೆಂದೇನುತ್ತಲೆ ಬಂದು
ತಾಯಿ ಮಾಡಿ ಹೋಗುವರು
ದಾರಿಯ ತಪ್ಪಿಸಿ ದೂರ ಮಾಡಿ
ನರಕ ತೋರಿಸುತ್ತಾರೆ ಎಚ್ಚರ //

ಹಸುಗೂಸು ಬಸುರಿ ಹೆಣ್ಮಗಳು
ಹಸು ಎಮ್ಮೆ ದನ ಕರವ ಬಿಡದ
ಹೊಲಸು ಮಾನವರೆ ತುಂಬಿಹರು
ತಾಯಿ ಹೊರಹೋದರೆ ಎಚ್ಚರ //

ಸಹಾಯದ ನೆಪದಲ್ಲಿ ಸಾಲ ಕೊಟ್ಟು
ಸಹವಾಸ ಮಾಡಿ ಕೆಡಿಸುವರು
ಸುಡಲು ಹೇಸದ ವಿಕೃತಿ ಮೆರೆವ
ಮೆತ್ತನೆಯ ಜನರಿಹರು ಎಚ್ಚರ ಎಚ್ಚರ //

ಕಲ್ಮೇಶ ಬಡಿಗೇರ
9743539657
.....ಬಾದಾಮಿ.......

- Kalmesh Badiger

04 Oct 2020, 09:24 pm
Download App from Playstore: