ಆ ಶಾಲೆಯಿಂದಾನೆ ಬಂದಿದ್ದು..
ಶಾಲೆಗೆ ಮಕ್ಕಳನ್ನು ಸೇರಿಸಬೇಡಿ
ಮೊದಲು ಆ ಶಾಲೆಗಳನ್ನು ಮುಚ್ಚಿ
ಇಲ್ಲಿ
ಮೇಷ್ಟ್ರು ನಡೆ ನುಡಿ ಬೇರೆಯಾಗಿ ಸುಳ್ಳುಗಾರನಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..
ಪೊಲೀಸ್ ಲಂಚ ವಸೂಲಿಗಾರನಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..
ವಕೀಲ ಹಣಪಡೆದು ಅನ್ಯಾಯದ ನ್ಯಾಯವಾದಿಯಾಗಿದ್ದಾನೆ
ಅವನು ಆ ಶಾಲೆಯಿಂದಾನೆ ಬಂದಿದ್ದು..
ವೈದ್ಯ ಶ್ರೀಮಂತ ರೋಗಿಯನ್ನು ಮಾತ್ರ ಮುಟ್ಟಿ ನೋಡುತ್ತಿದ್ದಾನೆ
ಅವನು ಆ ಶಾಲೆಯಿಂದಾನೆ ಶ್ರಮಪಟ್ಟು ಬಂದಿದ್ದು
ಸರ್ಕಾರಿ ಅಧಿಕಾರಿಗಳು ಹೆಚ್ಚು ಭ್ರಷ್ಟರಾಗಿದ್ದಾರೆ
ಅವರು ಆ ಶಾಲೆಯಲ್ಲೇ ಹೆಚ್ಚು ಇದ್ದು ಬಂದಿದ್ದು..
ರಾಜಕಾರಣಿ ಜಾತಿ ಧರ್ಮವ ಬಳಸಿ ಸಮಾಜಕ್ಕೆ ಕೋಮುವಾದದ ಬೆಂಕಿ ಹಚ್ಚಿ ದೇಶವನ್ನು ಅಳುತಿದ್ದಾನೆ
ಅವನು ಆ ಶಾಲೆಯಿಂದಾನೆ ಬೇಗ ಬಂದಿದ್ದು...
ಸುದ್ದಿವಾಹಿನಿಯವರು ಜ್ಯೋತಿಷಿಗಳನ್ನು ಕೂರಿಸಿಕೊಂಡು ಇಬ್ಬರು ಬೊಗಳೆ ಬಿಡುತ್ತಾ ಪುಂಗಿದಾಸರಾಗಿದ್ದಾರೆ
ಅವರು ಆ ಶಾಲೆಯಿಂದಾನೆ ಬಂದಿದ್ದು..
ಸಾಹಿತಿಗಳು ಇಲ್ಲದ ಸಲ್ಲದ ಭ್ರಮಸಂಗತಿಗಳನ್ನು ತುಂಬುವ ಚಿಂತಕರಾಗಿದ್ದಾರೆ
ಅವರು ಆ ಶಾಲೆಯಿಂದಾನೆ ನಿಧಾನಕ್ಕೆ ಬಂದಿದ್ದು
ಇಂತಹ ವ್ಯರ್ಥ ಮಾತುಗಳನ್ನಾಡುವ ನಾನು ಬಂದಿದ್ದು ಆ ಶಾಲೆಯಿಂದಾನೆ.. !
ದಯವಿಟ್ಟು..
ಶಾಲೆಗೆ ಮಕ್ಕಳ ಸೇರಿಸಬೇಡಿ
ಮೊದಲು ಆ ಶಾಲೆಗಳನ್ನು ಮುಚ್ಚಿ.....
-..ಪ್ರವೀಣಾ ಸಿಂಗೋನಹಳ್ಳಿ..
- praveens singonahalli
09 Oct 2020, 12:11 pm
Download App from Playstore: