ನನ್ನ ಪ್ರೀತಿಯ ಅರಿಯಲಿಲ್ಲ ನೀ
ನಗುವ ಹಿಂದಿನ ಕಣ್ಣಿರ ಕಂಡೆ, ಕಣ್ಣಿರ ಒಳಗಿನ ನೋವ ಕಂಡೆ, ನೋವ ಮರೆಸುವ ನಗುವಾದೆ,
ಆ ನಗು ಸದಾ ಇರಲೆಂದು ನಾ ಹರಸಿದೆ. ತಿಳಿಯದೇ ಹೋದೆ ನನ್ನ ಮಾನವ ನೀ ಇಂದು. ಬೇಸರದಲ್ಲಿ
ಹೇಳಿರುವೆ ನೀ ಇಂದು, ನಾನಿನ್ನ ಮಾನಸ ಅರಿತಿಲ್ಲವೆಂದು. ಒಡೆದ ಮನಸಲ್ಲು ಪ್ರೀತಿಸುವೆ ನಾ ಇಂದು,
ಬೇಸರದಲ್ಲಿ ಮರುಗಬೇಡ ನೀ ಎಂದು. ಬಾ ನನ್ನ ಮನಸೊಳಗೆ ಇಂದು, ಸಂತಸದಿ ನಲಿಯುತ್ತಾ
ಇರಲೆಂದು. ನಿನ್ನ ಮಾನಸ ಅರಿಯದೆ ಹೋದರೆ ನಾ ಇಂದು, ಪ್ರೀತಿಗೆ ಅರ್ಥವಿಲ್ಲದಂತೆ ತಿಳಿ ನೀ ಇಂದು.
ಅರ್ಥವಿಲ್ಲದ ಮಾನಸ ನನಗೇಕೆ, ನಿನ್ನ ಪ್ರೀತಿಯ ಅರಿಯದ ಈ ಜೀವನ ನನಗೆ ಬೇಕೇ?
- ss
08 Jul 2016, 09:20 pm
Download App from Playstore: