ತಾಯಿ ದೇವರು

ದುಡಿಯುತಲಿ ದುಃಖವನೆಲ್ಲ ನುಂಗಿ
ಹಾಲುಣಿಸಿ ಕರುಳ ಬಳ್ಳಿಯ ಕುಡಿಗೆ
ಸುತ್ತಿಗೆಯಲಿ ಹಿಡಿಗಲ್ಲು ಪುಡಿಮಾಡಿ
ದಣಿದು ಕುಂತಳು ತಾಯಿ ದೇವರಂತೆ //

ಅರೆಹೊಟ್ಟೆ ಅರೆಬಟ್ಟೆ ಬಿರುಬಿಸಿಲು
ಸುಳಿ ಗಾಳಿ ಚಳಿ ಗೆ ಅಂಜದೆ ತಾಯಿ
ಗುಡುಗು ಸಿಡಿಲು ಮಳೆ ಆರ್ಭಟ ಮೆಟ್ಟಿ
ಮಕ್ಕಳಿಗೆ ಸಲುಹಿದಳು ಮಹಾ ತಾಯಿ //

ಪಡಿಕಲ್ಲುಗಳ ಪುಡಿ ಗುಟ್ಟುತಾ ತಾಯಿ
ಹಸಿವ ನೀಗಿಸಿ ಹೊಸ ಜಗವ ಕಟ್ಟಿದೆ
ಹುಸಿ ಮಾತನಾಡದೆ ಹಸಿ ಕೂಸು ಎತ್ತಿ
ಕರುಣೆ ಮಮತೆಯಲಿ ತೇಲಿಸಿದೆ ತಾಯಿ //


ಕಷ್ಟದಲ್ಲು ಕಲ್ಪವಕ್ಷ ವಾದೆ ಜಗದಲ್ಲಿ
ಅಷ್ಟ ದಿಕ್ಕಿನಲ್ಲು ತಾಯಿ ದೇವರಾದೆ
ಸೃಷ್ಠಿಯಲ್ಲಿ ತಾಯಿಗಿಂತ ದೇವರಿಲ್ಲ
ವೆಂದು ಧರೆಗೆ ಸಾರಿ ಸಾರಿ ಹೇಳಿದಲ್ಲ //

ನಿನ್ನ ಒಡಲ ಕರುಳ ಕುಡಿಯ ಕಂದ
ಅಮ್ಮಾ ಎನಲು ಅಂದ ಮಹಾನಂದ
ದಣಿವು ಮರೆಸಿ ದುಃಖ ವನ್ನ ದೂಡಿ
ನಗುವ ತಾಯಿ ನಿನಗೆ ಕೋಟಿ ಶರಣು //

ಕಲ್ಮೇಶ ಬಡಿಗೇರ
9743539657
......ಬಾದಾಮಿ......

- Kalmesh Badiger

10 Oct 2020, 05:16 pm
Download App from Playstore: