ಮಾನವ 2020
ಕಾಡು ಕಡೆದು ನಾಡು ಬೆಳಸಿದೆ
ನಾಡ ನುಡಿಗಳ ದೂರಸರಿಸಿದೆ
ದಾರಿ ದಾರಿಗು ದೀಪ ವಿರಿಸಿದೆ
ನೀನ್ ಕತ್ತಲಲ್ಲಿ ಮುಳುಗಿದಲ್ಲ //
ಬೆಟ್ಟ ಗುಡ್ಡಗಳ ಅಗೆದು ಬಗೆದೆ
ಹಳ್ಳಕೊಳ್ಳಗಳನ್ನ ಮುಚ್ಚಿಬಿಟ್ಟೆ
ಹರಿವ ನದಿಗೆ ಅಡ್ಡ ಗೋಡೆ ಕಟ್ಟಿ
ಮರವ ಕಡಿದು ಕಲ್ಲುಗಳನು ನೆಟ್ಟೆ //
ಕಾಲಯಮನು ಕೆರಳಿದನೆಂದು
ಹೊಸದೊಂದು ಕಥೆಯಕಟ್ಟಿ
ಮಳೆ ಬೆಳೆಯು ಬತ್ತಿ ಹೋಗಲು
ದೇವರೆಡೆಗೆ ಹೊರಳಿ ಉಳನ್ನಿಟ್ಟೆ //
ಕ್ಷಣಿಕ ಸುಖಕ್ಕೆ ಧನಿಕರಿಗೆ ನಿನ್ನ
ಸಂತಸದ ಪಯಣ ಮಾರಿಬಿಟ್ಟೆ
ಅಯ್ಯೋ ನಾನು ತಪ್ಪು ಮಾಡ್ದೆ
ಎಂದು ನರಳಿ ಪ್ರಾಣವ ಬಿಟ್ಟೆ //
ಮಾನವ ಮಾನವ ಎಚ್ಚರ ಎಚ್ಚರ
ಸಾಕುಮಾಡು ಪ್ರಕೃತಿಯ ನಾಶ
ಕೆರಳಿನಿಂತರೆ ನಡೆವುದು ಅವಾಂತರ
ನೀನೆಲ್ಲಿ ಓಡುವೆ ಆಗ ದೇಶಾಂತರ //
ಕಲ್ಮೇಶ ಬಡಿಗೇರ
9743539657
......ಬಾದಾಮಿ......
- Kalmesh Badiger
10 Oct 2020, 05:39 pm
Download App from Playstore: