ದೇವ ಗಂಗೆ ಕಾವೇರಿ
ಭೂಮಿಯ ದಕ್ಷಿಣ ಬಾಗದ ತುದಿಯಲ್ಲಿ
ಜಲ ಕ್ಷಾಮವು ತೋರಲು ಭಾರತದಿ
ನೆಲ ಜಲ ಪ್ರಾಣಿ ಪಕ್ಷಿ ಮರ ಗಿಡ ಒಣಗಿ
ಋಷಿ ಮುನಿಗಳು ಬೇಡಲು ದೇವರಲಿ //
ಕೈಲಾಸದ ಕಡೆ ಪ್ರಯಾಣವ ಬೇಳೆಸುತಲಿ
ಮಹಾದೇವನ ಬೇಡಿಕೊಳ್ಳಲು ಭಕ್ತಿಯಲ್ಲಿ
ಶ್ರೀ ಅಗಸ್ತ್ಯ ಮುನಿಗಳ ಭಕ್ತಿಗೆ ವಲಿಯುತ
ಪರಶಿವನು ಕರುಣಿಸಿದ ದೇವ ಗಂಗೆಯನು //
ಪಯಣದ ಹಾದಿಯ ಸುಸ್ತನು ಕಳೆಯಲು
ಘಟ್ಟದ ಮೆಗಡೆ ತುಸು ವಿಶ್ರಮಿಸಲು
ಗಜಮುಖ ದೇವನು ಕಾಕರಾಜನ ರೂಪದಿ
ಉರುಳಿಸಿದನು ಜಲ ಕಮಂಡಲವ ಕೆಳಗೆ //
ಉಕ್ಕುತಾ ಹರಿದಳು ದೇವ ಗಂಗೆಯೂ
ಕಾವೇರಿ ಎಂಬ ಹೊಸ ನಾಮದಲಿ
ಘಟ್ಟವ ಇಳಿದು ಜಲ ಭವನೆಯ ನೀಗಿ
ರಭಸದಲಿ ಸಾಗಿದಳು ತಾಯ್ ಕಾವೇರಿ //
ಅಂದಿನಿಂದ ಇಂದಿನವರೆಗೂ ಕಾವೇರಿಯು
ಸಕಲ ಜೀವಜಂತು ರೈತರನು ಸಲಹುತಾ
ಕೊಡಿಗಿನ ಕಾವೇರಿ ಎಂಬೇಸರಿನಲಿ ತಾಯಿ
ಪ್ರಖ್ಯಾತಿ ಯ ಪಡೆದಳು ಭಾರತ ಖಂಡದಲಿ //
ಕಲ್ಮೇಶ ಬಡಿಗೇರ
9743539657
.......ಬಾದಾಮಿ.......
- Kalmesh Badiger
11 Oct 2020, 11:39 am
Download App from Playstore: