ನಡೆ ನುಡಿ ಹಿತ ಮಿತ
ನಾವು ಆಡುವ
ಮಾತು ಬಲು ಚಂದವೆಂದು
ಆಡದಿರಿ ಹಸಿ ಸುಳ್ಳು
ಚುಚ್ಚದಿರಲಿ ಮಾತು ಮುಳ್ಳಾಗಿ
ಕೊಲ್ಲದಿರಲಿ ಮೌನವಾಗಿ
ಮಾತು ಹಿತವಾಗಿರಲಿ
ಮೌನ ಮಿತವಾಗಿರಲಿ
ಇಲ್ಲವಾದಲ್ಲಿ ಮಾತು
ಮುಳ್ಳಾಗುವುದು
ಮೌನ ವಿಷವಾಗುವುದು
ಎಚ್ಚರವಿರಲಿ
ನಾವು ಆಡುವ ಮಾತಿನಲ್ಲಿ
ಹಿಡಿತವಿರಲಿ
ನಮ್ಮ ನಡೆ ನುಡಿಯಲ್ಲಿ
- ರಾಜು ಹಾಸನ
12 Oct 2020, 12:01 am
Download App from Playstore: