ಪಂಗನಾಮ

ಚಿಲ್ಲರೆ ಕೊಟ್ಟರೆ ಮುಟ್ಟುವುದಿಲ್ಲ
ನೋಟು ಕೊಟ್ಟರೆ ಬಿಡುವುದಿಲ್ಲ
ನಮ್ಮ ಅಧಿಕಾರಿಗಳು
ಅರ್ಜಿ ಕೊಟ್ಟರೆ ಸ್ವೀಕರಿಸುವುದಿಲ್ಲ
ಅಧಿಕಾರ ಕೊಟ್ಟರೆ ತಿರಸ್ಕಾರಿಸುವುದಿಲ್ಲ
ನಮ್ಮ ಜನ ನಾಯಕರು

ಹಣ್ಣುಕಾಯಿ ಕೊಟ್ಟರೆ ಆರತಿ
ದುಡ್ಡು ಕೊಟ್ಟರೆ ಮಂಗಳಾರತಿ
ಖಾಲಿ ಕೈಗೆ ಚೆಂಡು ಹೂವು
ಹಣೆಗೆ ಪಂಗನಾಮ ಹಾಕಿ
ಪುಂಗಿ ಊದುವರಯ್ಯ
ಡೊಳ್ಳು ಹೊಟ್ಟೆ ಪೂಜಾರಿಗಳು

- ರಾಜು ಹಾಸನ

12 Oct 2020, 09:30 am
Download App from Playstore: