ದಾರಿ ತಪ್ಪಿದ ಮಗ
ಮಳೆಯೆಂದರೆ
ನೆನೆಯುವುದು ಸಹಜ
ಚಳಿಯೆಂದರೆ
ನಡುಗುವುದು ಉಚಿತ
ಬಿಸಿಲೆಂದರೆ
ಒಣಗುವುದು ಕಚಿತ
ಆಟವೆಂದರೆ
ಸೋಲು ಗೆಲುವು ನಿಶ್ಚಿತ
ನಿಲ್ದಾಣವೆಂದರೆ ಹತ್ತಿ
ಇಳಿಯುವುದು ನಿಯಮ
ಜೀವನವೆಂದರೆ
ಕಲಿಯಬೇಕು ಪಾಠ
ಯಾರು ಯಾರಿಗಾಗಿಯು ಇಲ್ಲ
ಎಲ್ಲರೂ ಅವರವರಿಗಾಗಿ
ನಿನ್ನ ದಾರಿ ನಿನಗಾಗಿ
ಅವರ ದಾರಿ ಅವರಿಗಾಗಿ
ಇಲ್ಲದಿದ್ದರೆ ನೀ ಆಗುವೆ
ದಾರಿ ತಪ್ಪಿದ ಮಗ
*******ರಾಜು ಹಾಸನ*******
- ರಾಜು ಹಾಸನ
15 Oct 2020, 01:21 am
Download App from Playstore: