ತುಂತುರು ಮಳೆ
ತುಂತುರು ತುಂತುರು
ತುಂತುರು ಮಳೆ
ಹನಿ ಹನಿಯಾಗಿ
ಜಿನುಗುವ ಸೋನೆ ಮಳೆ
ಅಳ್ಳಕೊಳ್ಳ ಉಕ್ಕಿ ಹರಿಯುವ
ಬರಸಿಡಿಲ ಮಳೆ
ರೈತರ ಪಾಲಿನ
ಹರುಷದ ಮಳೆ
ಮಳೆರಾಯ ಬಂದರೆ
ಹರುಷವಯ್ಯ ಹರುಷ
ಸುರಿಯಲಿ ಹನಿ ಹನಿ
ತುಂತುರು ಸೋನೆ ಮಳೆ
ಬಾರದಿರಲಿ ಕಣ್ಣೀರ ಮಳೆ
ಕೊಚ್ಚಿಕೊಂಡು ಹೋಗದಿರಲಿ
ಜನರ ಬದುಕು ಕನಸು
ಬರಸಿಡಿಲ ಹುಚ್ಚು ಮಳೆ
- ರಾಜು ಹಾಸನ
15 Oct 2020, 02:29 am
Download App from Playstore: