ಬೂಟಾಟಿಕೆ

ದೇವರು ಬರುವುದಯ್ಯ
ಮೈ ಮೇಲೆ ಬಂದು
ಕೇಳುವುದಯ್ಯ
ಬಾಲಕ ನಿನ್ನ ಸಮಸ್ಯೆ ಏನೆಂದು
ಭಕ್ತ ಹೇಳುವನಯ್ಯ
ಈ ಭಕ್ತನ ಕೂಗು ಇಷ್ಟು ದಿನ
ನಿನಗೆ ಕೇಳಿಸಲಿಲ್ಲವೇ
ನೀ ಎಲ್ಲಿ ಹೋಗಿದೆ ನನ್ನಪ್ಪ
ನಾ ಊರು ಊರು
ಸುತ್ತಲು ಹೋಗಿದೆ
ನಿನಗೇನು ಕಷ್ಟ
ಏನು ಹೇಳು ಬಾಲಕ
ನನ್ನ ಕಷ್ಟಗಳು ನಿನಗೆ
ತಿಳಿಯದೆ ನನ್ನ ತಂದೆ ನೀನಪ್ಪ
ಊರು ಊರು ಸುತ್ತವ
ನನಗೆ ಮನೆ ಮನೆಗೆ ಭಕ್ತರಿರುವರು
ನಿನ್ನ ಕಷ್ಟ ನನಗೆ ತಿಳಿದಿಲ್ಲ
ಈಗ ಹೇಳು ನನ್ನ ಮಗನೇ
ನನ್ನ ಕಷ್ಟವ ನಾನೇ
ನಿನಗೆ ಹೇಳುವುದಾದರೆ
ನೀನೇಕೆ ಬೇಕಪ್ಪ
ನೀ ಸುಮ್ಮನೆ ಹೋಗಿಬಿಡಪ್ಪ
ನೀನು ಯಾವ ಎಂತಾ
ಬೂಟಾಟಿಕೆ ದೇವರಪ್ಪ
*******ರಾಜು ಹಾಸನ********

- ರಾಜು ಹಾಸನ

28 Oct 2020, 11:44 pm
Download App from Playstore: