ದಾಸ

ಜೀವವಿಲ್ಲದ
ಮಾತು ಬಾರದ ನಾನು
ನನ್ನ ಪಾಡಿಗೆ ನಾ ಬಿದ್ದಿದೆ
ಚಳಿ ಗಾಳಿ ಮಳೆ ಎನ್ನದೇ
ಬಿಸಿಲು ಬೆಂಕಿ ಕಾಯುತ್ತಾ
ಹೋತು ಕೊಂಡು ಬಂದರೆ
ನಾನೇನು ಮಾಡಲ್ಲಯ್ಯ
ದಾಸ ಓ ದಾಸ

ದಬದಬನೆ ತಣ್ಣೀರು ಸುರಿದು
ಹಾಲು ತುಪ್ಪದ ಹೋಳಿಗೆ ಇಟ್ಟು
ಬಣ್ಣ ಬಣ್ಣದ ಬೊಟ್ಟಿಟು
ತುಂಡು ಬಟ್ಟೆಯ ಸುತ್ತಿ
ಹೊವಿನ ಎಸಳು ಎರಚಿ
ಗುಡಿಯಲ್ಲಿಟ್ಟು ಪೂಜಿಸಿದರೆ
ನಾನೇನು ಹೇಳಲ್ಲಯ್ಯ
ದಾಸ ಓ ದಾಸ

ದಿನ ಬೆಳಗಾದರೆ
ಬರುವರಯ್ಯ ಮೂರ್ಖರು
ಘರನೆ ಘರಘರನೇ
ಸುತ್ತುವರಯ್ಯ ನನ್ನ ಗುಡಿಯ
ಘಂಟೆ ನಗಾರಿ ಬಾರಿಸಿ
ಬಿದ್ದು ಬೇಡುವರಯ್ಯ ವರವಾ
ನಾ ಹೇಂಗೆ ಕೊಡಲಯ್ಯ
ದಾಸ ಓ ದಾಸ
********ರಾಜು ಹಾಸನ********

- ರಾಜು ಹಾಸನ

29 Oct 2020, 05:16 pm
Download App from Playstore: