ಜಾಣ ಕುರುಡು

ನೋಡಲು ಕಣ್ಣಿಲ್ಲ
ತಿನ್ನಲು ಬಾಯಿಲ್ಲ
ಕೇಳಲು ಕಿವಿ ಇಲ್ಲದ
ಕಲ್ಲ ಸುತ್ತ ಸುತ್ತುವೆಕ್ಕೆ
ಸುತ್ತವ ಮನಸಿದ್ದರೆ
ಸುತ್ತು ನೆಗಿಲ ಹಿಂದೆ
ತುಂಬಿಕೊಳ್ಳುವುದು
ನಿನ್ನ ಹಸಿದ ಜೋಳಿಗೆ

ಜೀವವಿಲ್ಲದ ಕಲ್ಲಿನ ಮೇಲೆ
ಹಾಲು ತುಪ್ಪವ ಸುರಿದು
ಕಲ್ಲಿನ ಮುಂದೆ
ಅನ್ನದ ಎಡೆಯಿಟ್ಟು
ಸುಮ್ಮನೆ ವ್ಯರ್ಥ
ಮಾಡುವ ಬದಲು
ಹಸಿದವನಿಗೆ ಕೊಟ್ಟರೆ
ದೊರಕುವುದಯ್ಯ ಮುಕುತಿ

ಪ್ರಾಣಿ ಪಕ್ಷಿಗಳಿಗೆ
ಇಲ್ಲ ಒಂದು ಹೆಸರು
ಕಾಡು ಕಲ್ಲಿಗೆ ಇರುವುದು
ನೂರೆಂಟು ಹೆಸರು
ನಮಗೆ ಹೆಸರಿಡುವುದಿಲ್ಲ
ನಾವೇ ಹೆಸರಿಡುವೆವು
ತರ ತರವಾದ ಹೆಸರು
ಬಂಡೆ ಕಲ್ಲಿನ ಮೂರ್ತಿಗೆ

ಜಾಣನಿಗೆ ಜಾಣನಲ್ಲ
ದಡ್ಡನಿಗೆ ದಡ್ಡನಲ್ಲ
ಮೂಢರಲ್ಲಿ ಮೂಢನಯ್ಯ
ಈ ಮೂರ್ಖ ಮನುಜ

- ರಾಜು ಹಾಸನ

30 Oct 2020, 05:55 pm
Download App from Playstore: