ಕಾಲಚಕ್ರ
ಕಾಲಚಕ್ರವೂ ತಿರುಗುತಿಹುದು
ತಿಳಿಹೇಳಲು ಸೋತವಂಗೆ,
ಕೊರಗಿ ಕುಗ್ಗಬೇಡ ನೀ, ಅವಕಾಶಗಳು
ಸಾಗರದಷ್ಟುಂಟು ನೀ ಯಾರೆಂಬುದ
ತೋರಿಸಲಿಕ್ಕೆ ಈ ಜಗಕೆ.
ಕಾಲಚಕ್ರವೂ ತಿರುಗುತಿಹುದು
ಎಚ್ಚರಿಸಲು ಗೆದ್ದವಂಗೆ,
ಮರೆತು ಮೆರೆಯಬೇಡ ನೀ, ಸಾಧಿಸುವುದು
ಗಗನದಷ್ಟುಂಟು ಸಾಧನೆಗೆ ಮಿತಿಯಿಲ್ಲ
ಸಾಧಿಸುವ ಮನಸ್ಸಿರುವವರೆಗೆ.
ವಸಂತ ಕಾಲ ಬಂದಾಗ ಕಾಲಚಕ್ರವೇ
ತೋರುವುದು ಕಪ್ಪಾಗಿರುವುದು ಕಾಗೆಯೋ
ಕೋಗಿಲೆಯೋ ಎಂದು,
ಕಾಲಚಕ್ರವೂ ಕಾಯುತ್ತಿಹುದು ಇಂದು,
ತೋರಲು
ಈ ಜಗಕೆ ನಾಳೆ ನಾವೆನೆಂದು
ಕಾಲಾಯೇತಸೈನಮಃ......
- ಕೃಷ್ಣ
09 Jul 2016, 08:32 pm
Download App from Playstore: