ಗಿರ್ಗಿಟ್ಲೆ
ಸುಮ್ಮನೆ ಇದ್ದ ಜನರ
ಕಾಲು ಕೆರೆದು ಕೆಣಕಿದರೆ
ಬಿಡರಯ್ಯ ಎಡಬಿಡದೆ
ಕೆಚ್ಚಿಬಿಡುವರಯ್ಯ
ಕರಿ ನಾಗರವ
ಹಿಡಿದು ಮುಟ್ಟಿದರೆ
ಕಚ್ಚದೆ ಮುತ್ತಿಡುವುದೇ
ಮುತ್ತಿಟ್ಟ ಘಳಿಗೆಯಲ್ಲಿ
ಹಾರಿ ಹೋಗದಿರುವುದೇ
ನಮ್ಮ ಪ್ರಾಣ ಪಕ್ಷಿ
ಇಲ್ಲೊಬ್ಬ ಇರುವನಯ್ಯ
ಚಿತ್ರ ವಿಚಿತ್ರವಾದ ಮನುಷ್ಯ
ಕರಿ ನಾಗರವ ಹಿಡಿದು
ತನ್ನ ಕೊರಳು ಹೊಟ್ಟೆಯ ಸುತ್ತ
ಸುತ್ತಿಕೊಂಡಿರುವ
ದೇವಾನು ದೇವರಯ್ಯ
ಕೊರಳಿಗೆ ಸುತ್ತಿಕೊಳ್ಳಲು
ಅದೇನು ಬಂಗಾರ ಒಡವೆಯೇ
ಇಲ್ಲ ಸೊಂಟಕ್ಕೆ
ಸುತ್ತಿ ಕೊಳ್ಳಲು ಬೆಳ್ಳಿ ಉಡ್ದರವೇ
ಯಾಕ್ಕೊ ಏನೋ ಹಿಂಗೇ
ಸುಳ್ಳಿನ ಸರ ಮಾಲೆ ಎಣೆದು
ಮುಗ್ಧ ಜನರ ತಲೆಗೆ ಸುತ್ತಿ
ಗಿರ್ಗಿಟ್ಲೆ ಆಡಿಸುತ್ತಿರುವವನು
ಯಾವನೋ ಯಾರೋ
ನನಗೆ ಗೊತ್ತಿಲ್ಲ ಆ ಆದಾಮನು
- ರಾಜು ಹಾಸನ
02 Nov 2020, 02:45 pm
Download App from Playstore: