ಕರಿ ನೆರಳು

ದೇವರ ಬೈದರೆ
ಬರುವುದಂತೆ ಕರ್ಮ
ಸುತ್ತಿಕೊಳ್ಳುವುದಂತೆ
ಮೈ ತುಂಬಾ ಪಾಪ
ದಿನ ಬೆಳಗಾದರೆ
ಪೂಜಿಸಿ ಆರಾಧಿಸುವ
ಬಡ ಜನರಿಗೆಕ್ಕೆ
ಬಂದಿಲ್ಲಾ ಸಿರಿತನ
ಸುತ್ತಿಕೊಂಡಿರುವುದಯ್ಯ
ಬಡತನವೆಂಬ ವಿಷ ಸರ್ಪ
ಹಾಸಿಕೊಂಡಿರುವುದಯ್ಯ
ಮುಳ್ಳಿನ ಕರಿ ಕಂಬಳಿ
ಸುರಿಯುತ್ತಿರುವುದಯ್ಯ
ಕಣ್ಣೀರಿನ ಮಹಾಮಳೆ
ಹರಿಯುತ್ತಿರುವುದಯ್ಯ
ರಕ್ತ ಕಣ್ಣೀರಿನ ಹೊಳೆ
ಇದು ಯಾಕೆ ಹಿಂಗೇಕ್ಕಯ್ಯ
ನೀ ಹೇಳು ಓ ಮನುಜ

ಒಂದು ಮಾತು
ಒಂದು ದಿನವೂ
ಒಂದು ಕ್ಷಣವೂ
ದೇವರ ಬೈಯದ
ಮೂಕ ಪ್ರಾಣಿಗಳ
ಮಾತು ಕಿತ್ತುಕೊಂಡವನು
ಯಾರಯ್ಯ ಯಾಕಯ್ಯ
ಮೂಕ ಪ್ರಾಣಿಗಳು ಮಾಡಿದ
ತಪ್ಪಾದರೂ ಏನಯ್ಯ
ಯಾವ ಪಾಪ ಪುಣ್ಯದ
ಅರಿವಿಲ್ಲದ ಮೂಕ
ಪ್ರಾಣಿಗಳಿಗೆಕ್ಕಯ್ಯ ಈ ಶಿಕ್ಷೆ
ಎಲ್ಲ ನಮ್ಮ ನಮ್ಮ
ಕನಸಿನ ಭ್ರಮೆ ಅಷ್ಟೆ
ನೀ ತಿಳಿಯಯ್ಯ
ಓ ಮನುಜ ವಿಶ್ವ ಮನುಜ

********ರಾಜು ಹಾಸನ********

- ರಾಜು ಹಾಸನ

02 Nov 2020, 03:21 pm
Download App from Playstore: