ಸುಳ್ಳೆ ಸುಳ್ಳೋ

ಸುಳ್ಳೆ ಸುಳ್ಳೋ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ
ಪ್ರೀತಿ ಪ್ರೇಮ ಅನ್ನೊದು
ಬರಿ ಸುಳ್ಳೆ ಸುಳ್ಳೋ
ನಾನು ಮಾಡಿದ ಪ್ರೀತಿ ಸುಳ್ಳೋ
ನೀನು ಕೊಟ್ಟ ಪ್ರೀತಿ ಸುಳ್ಳೋ
ನಾನು ಕಂಡ ಕನಸು ಸುಳ್ಳೋ
ನೀನು ಕಟ್ಟಿದ ಕನಸು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

ನಾನು ಬರೆದ ಪ್ರೇಮ ಪತ್ರ ಸುಳ್ಳೋ
ನೀನು ಓದಿ ಬರೆದ ಪ್ರೇಮ ಪತ್ರ ಸುಳ್ಳೋ
ನಾನು ಆಡಿದ ಮಾತು ಸುಳ್ಳೋ
ನೀನು ಇಟ್ಟ ಹಣೆ ಮಾತು ಸುಳ್ಳೋ
ನಾನು ನಂಬಿದ ನೀನು ಸುಳ್ಳೋ
ನೀನು ನಂಬಿದ ನಾನು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

ನಿನಗಾಗಿ ನಾನು ಅತ್ತಿದ್ದು ಸುಳ್ಳೋ
ನನಗಾಗಿ ನೀನು ಅತ್ತಿದ್ದು ಸುಳ್ಳೋ
ನಿನಗಾಗಿ ನಾನು ಬರುತ್ತಿದ್ದದ್ದು ಸುಳ್ಳೋ
ನನಗಾಗಿ ನೀನು ಕಾಯುತ್ತಿದ್ದದ್ದು ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

ನಾನು ಸುತ್ತಿ ಬೇಡಿದ್ದು ಸುಳ್ಳೋ
ನೀನು ಬೈದು ಬುದ್ಧಿ ಹೇಳಿದ್ದು ಸುಳ್ಳೋ
ನಿನಗಾಗಿ ನಾನು ಹುಟ್ಟಿದ್ದು ಸುಳ್ಳೋ
ನನಗಾಗಿ ನೀನು ಹುಟ್ಟಿದ್ದು ಸುಳ್ಳೋ
ನಾನು ಮಾಡಿದ ಮೋಸ ಸುಳ್ಳೋ
ನೀನು ಮಾಡಿದ ಮೋಸ ಸುಳ್ಳೋ
ಸುಳ್ಳೆ ಸುಳ್ಳೋ ಈ ಪ್ರೀತಿಯಲ್ಲಿ
ನಾನು ಸುಳ್ಳೋ ನೀನು ಸುಳ್ಳೋ
ಎಲ್ಲಾ ಸುಳ್ಳೇ ಸುಳ್ಳೋ

- ರಾಜು ಹಾಸನ

03 Nov 2020, 12:55 am
Download App from Playstore: