ಪ್ರೇಮ ಗೀತೆ
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ಸುಮ್ಮನಿರಲು ಬಿಡದು
ನೀ ಬಿಟ್ಟುಹೋದ ಈ ಹೃದಯ
ತಾಳಲಾರೇನು ಸಹಿಸಲಾರೇನು
ಮನಸಿನ ಕಸಿಬಿಸಿಯ
ನಿನ್ನ ಬಿಟ್ಟು ಒಂಟಿಯಾಗಿ
ಬದುಕಿ ಬಾಳುವ ಆಸೆ ನನಗಿಲ್ಲ
ಸನಿಹವೇ ಸುಳಿದಾಡುವ ಜವರಯನ
ಜೋತೆ ಹೋಗುವ ಆಸೆ ನನಗೆಲ್ಲ
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ನಿನ್ನ ಮಾತುಗಳಿಲ್ಲದೆ
ಕಿವಿ ಕೇಳಿಸದ ಕಿವುಡನಾಗಿರುವೇ
ನಿನ್ನ ಮಾತುಗಳು ಕೇಳಿಸಿದರು
ಪದೇ ಪದೇ ಕೇಳುವ ಮನಸ್ಸು ನನಗೆಲ್ಲ
ನಿನ್ನ ಪ್ರತಿಬಿಂಬವಿಲ್ಲದೆ
ಕಣ್ಣು ಕಾಣಿಸದ ಕುರುಡನಾಗಿರುವೆ
ನಿನ್ನ ನೋಡಿ ಕಣ್ಣ್
ತುಂಬಿಕೊಳ್ಳುವ ಕನಸುಗಳೆ ನನಗೆಲ್ಲ
ನಿನ್ನ ನಗುವಿಲ್ಲದೆ ಮಾತು
ಬಾರದ ಮೂಗನಾಗಿರುವೇ
ನಿನ್ನ ನಗುವ ಕಂಡು ನಕ್ಕುನಲಿಯುವ
ಮುದ್ದಿನ ಅರಗಿಣಿ ನೀನೆ ನನಗೆಲ್ಲ
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
ನಿನ್ನ ಪ್ರೀತಿ ಇಲ್ಲದೆ
ಬರಿದಾಗಿದೆ ನನ್ನೆದೆಯ ಗೂಡು
ಬರಿದಾದ ಗೂಡಿಗೆ ನಿನ್ನ ಪ್ರೀತಿಯ
ಬೆಳಕೆ ದಾರಿದೀಪವು ನನಗೆಲ್ಲ
ಉಕ್ಕಿ ಹರಿಯುತವ ಮನಸ್ಸಿನ
ನೋವನು ಬಚ್ಚಿಡಲಾರೇನು
ನನ್ನವಳು ನನ್ನವಳು ನನಗೆಲ್ಲ
ನೀನು ಕೊಟ್ಟ ಪ್ರೀತಿಯೇ ನನಗೆಲ್ಲ
- ರಾಜು ಹಾಸನ
03 Nov 2020, 11:55 pm
Download App from Playstore: