ಭೀಮ ಗೀತೆ

ಜೈ ಜೈ ಜೈ ಭೀಮ್
ನಾವು ಜೈ ಭೀಮನ ಮಕ್ಕಳು
ಜೈ ಭೀಮನ ಮರಿ ಆನೆಗಳು
ಇಲ್ಲಿ ಯಾರು ಕೆಮ್ಮಗಿಲ್ಲ
ಕೆಣಕಿದರೆ ಬಿಡೋದಿಲ್ಲ
ಸುಮ್ಮನೆ ಕಾಲುಕೆರದು
ನಮ್ಮ ತಂಟ್ಟೆಗೆ ಬಂದರೆ
ಬಿಡೋದಿಲ್ಲ ಉಳಿಸೋದಿಲ್ಲ
ಉರುಳಿಸಿ ಚಂಡಾಡುವೆವು
ಮನುವಾದಿಗಳ ರುಂಡ ಮುಂಡ
ಗಂಚಾಲಿ ಮಾಡಿದರೆ ಸಿಗಿದು
ತೋರಣ ಕಟ್ಟಿ ಬಿಡುವೆವು
ಎಚ್ಚರ ಎಚ್ಚರ ಎಚ್ಚರ
ಕಟ್ಟೆಚ್ಚರವಿರಲಿ ಮನುವಾದಿಗಳಿಗೆ
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಮೂಢನಂಬಿಕೆಯ ಧಿಕ್ಕರಿಸಿ
ಮೋಸ ವಂಚನೆಯ ಖಂಡಿಸಿ
ಅನ್ಯಾಯದ ವಿರುದ್ಧ ಹೋರಾಡಿ
ದಂಡು ದಾಳಿಗೆ ಹೆದರದೆ ಬೆದರದೆ
ಭೀಮ್ ಕೊರೆಂಗಾವ್ ಗೆದ್ದ
ಸಿಡಿಲ ಸಿಂಹದ ಮರಿಗಳ
ಮರಿ ಮೊಮ್ಮಕ್ಕಳು ನಾವು
ಭಯವಿಲ್ಲ ಹೆದರುವುದಿಲ್ಲ
ಕೆಚ್ಚೆದೆಯ ಕಲಿಗಳು
ಗಂಡೆದೆಯ ಗಂಡುಗಲಿಗಳು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಬಡವರ ಸ್ತ್ರೀ ಶೋಷಿತರ
ರಕ್ಷಣೆ ಏಳಿಗೆಯ ಸಹಿಸದ
ದುರುಳ ನೀಚರನ್ನು ಸದೆಬಡಿದು
ಸ್ನೇಹ ಪ್ರೀತಿ ಸಮಾನತೆ
ಸಹಬಾಳ್ವೆ ನಮ್ಮಉಸಿರೆಂದು
ಜೀವನ ಪೂರ್ತಿ ಬದುಕುವ
ನ್ಯಾಯ ನೀತಿಗೆ ಬೆಲೆ ಕೊಟ್ಟು
ತಲೆ ಬಾಗಿ ನಡೆಯುವ
ಬುದ್ಧನ ವಂಶಸ್ಥರು
ನಾಗ ಕುಲದವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

ಬುದ್ದನ ಧರ್ಮವೇ ನನ್ನ ಧರ್ಮ
ಸಂವಿಧಾನವೇ ನನ್ನ ಧರ್ಮ ಗ್ರಂಥ
ಜೈ ಭೀಮನೇ ನನ್ನ ಗುರು
ಜೈ ಭೀಮನೇ ನಮ್ಮ ಕುಲದೇವರು
ನಾವು ಜೈ ಭೀಮನ ಮಕ್ಕಳು
ನಾವು ಜೈ ಭೀಮನ ಸೈನಿಕರು

- ರಾಜು ಹಾಸನ

04 Nov 2020, 02:45 pm
Download App from Playstore: