ಗೆಳೆಯನ ಹುಟ್ಟುಹಬ್ಬ
ಅಪರಿಚಿತರಗಿ ಹುಟ್ಟಿ ಬೆಳೆದು
ಚಿರ ಪರಿಚಿತರವಾದ ಸ್ನೇಹ ಸಂಬಂಧ
ಸ್ವಚ್ಚಂದವಾಗಿ ಬಾನಂಗಳದ
ಬಾನಿನಲ್ಲಿ ಹಾರಾಡಿ ತೂರಾಡಿ
ನಕ್ಕು ನಲಿದು ಕುಣಿದು ಕುಪ್ಪಳಿಸಿ
ಹೆಜ್ಜೆಯ ಹಿಂದೆ ಹೆಜ್ಜೆಯನ್ನಿಕ್ಕುತ್ತಾ
ಜೊತೆಗೂಡಿ ನಡೆದಾಡಿದ
ನಮ್ಮಿಬ್ಬರ ಸ್ನೇಹ ಹೀಗೆ ಸಾಗಲಿ
ಚಿರಕಾಲವಿರಲಿ ಸದಾ ಕಾಲವಿರಲಿ
ಉಕ್ಕಿ ಹರಿಯಲಿ ಈ ಸ್ನೇಹದ ಕಡಲು
ನಂಬಿಕೆಯ ಉಸಿರಾಗಿ
ಮಾತು ಮುತ್ತಾಗಿ ಹೊಳೆದು
ಬೆಳಕು ಚೆಲ್ಲಲಿ ನಾವು ಸಾಗುವ
ಈ ಬದುಕಿನ ಪಯಣದ ಹಾದಿಯಲ್ಲಿ
ಹರುಷ ತುಂಬಿದ ಜೇನಾಗಿರಲಿ
ಸಂಬಂಧಗಳ ಸೇತುವೆಯಾಗಿರಲಿ
ಈ ಸ್ನೇಹ ಸಂಬಂಧದ ಬೆಸುಗೆ
ಪ್ರೀತಿ ಮಮಕಾರದ ಮಡಿಲಗಲಿ
ಹೀಗೆ ಸದಾ ಕಾಲ ಚಿರಕಾಲ
ವರುಷ ವರುಷಗಳು ಉರುಳಿದರು
ನಕ್ಕು ನಲಿಯುತ್ತಾ ಸಂತ್ತೋಷದಿ
ಬದುಕಿ ಬಾಳೆಂದು ಹಾರೈಸುವೆನು
ನಿನ್ನ ಹುಟ್ಟು ಹಬ್ಬಕ್ಕೆ ಶುಭ ಕೋರುವೆನು
ಇಂತಿ ನಿನ್ನ ಜೀವದ ಗೆಳೆಯ
- ರಾಜು ಹಾಸನ
04 Nov 2020, 11:52 pm
Download App from Playstore: