*** ಹೊತ್ತಿನ ಮುತ್ತು***
ತಪ್ಪಿ ಹೋದಿತೆ ಹೊತ್ತಿನ ಮುತ್ತು
ಮತ್ಯಾಕೆ ಕಲ್ಲಾಯಿತೆ ಮನಸ್ಸು
ಅರಳುವ ಜೀವಕೆ ಬಾಡಿದ ಮಾತೆಕೆ
ಮರುಳಾಗದ ಮಾಣಿಕ್ಯ ಅಂಗೈಯಲ್ಲಿರುವಾಗ॥
ಕೈ ಚೆಲ್ಲಿ ಕುಳಿತೆ ಕತ್ತಲಾಗುವ ಮುನ್ನ
ಬೆಳಕನ್ನೆಕೆ ನೆನೆದು ಕಣ್ಣಿರುಡುವೆ
ಸೂರ್ಯನ ಬೆಳಕೊ ಹೊತ್ತು ಮುಳಗೊತನಕ
ಚಂದಿರನಿಗಾಗಿ ಏಕೆ ಕಾಯುವೆ ಅಮವಾಸ್ಯೆ ದಿನಂದು
ಹುಣ್ಣಿಮೆಯ ರಾತ್ರಿಗೆ ಮರುಳಾಗದಿರೊ ಮತ್ತೊಮ್ಮೆ
ಕ್ಷಣಿಕ ಕಲ್ಪನೆಗಾಗಿ ಕೈ ಚೆಲ್ಲಿ ಕುಳಿತೆ ನಿಲುಕದ ನಕ್ಷತ್ರಕೆ ॥
ಚಿಂತಿಸುವುದೇಕೆ ಮರಳಿಬಾರದ ಕಾಲಕೆ
ತಿರುಗಿ ತಿರುಚಿದರು ಗಡಿಯಾರದ ಮುಳ್ಳು ಮರಳಿತೆ
ಉರುಳಿ ಹೋದ ಸಮಯವಲ್ಲ....
ಚಿಂತಿಸಿ ಫಲವೇನು ಇರುವ ಪ್ರಯತ್ನವ ಕೈ ಚೆಲ್ಲಿ
ಅವಸರವೇಕೆ ಆವೇಷದಲಿ..
ದುಡುಕಿದ ನಿರ್ಧಾರಕೆ ನಿದರ್ಶನ ನಿನ್ನೊಳಗಿನ ತಾಳ್ಮೆ
ಅದನ್ನರಿಯದೆ ಚಿಂತಿಸಿ ಫಲವೇನು .....॥
ಯಾರಿಗಾಗಿ ಕಾಯುತಿರುವೆ ಕಾಯಿಸುವುದೆ ಈ ಸಮಯ
ಕಾಯೊ ಮನಸ್ಸಿದೆ ಕಾಯಿಸೊ ಸಮಯವಿಲ್ಲ
ಯಾರಿಗಾಗಿ ಯಾರು ಇಲ್ಲ ಓಡುತಿಹದು ಕಾಲ
ಕಾಲಘಟ್ಟದಲಿ ಮಿತಿಯಿಲ್ಲ ಕಾಲ ನಿರ್ಣಯವೆ ಅಂತಿಮ
ಕಾಯುತಿರುವೆ ಯಾರಿಗಾಗಿ
ಕಾಯಿಸೊ ಸಮಯ ನಿನ್ನದಲ್ಲ॥
ಅರಳೊ ಹೂವಿಗೆ ಬಾಡಿ ಹೋಗುವ ಸಮಯ ತಿಳಿದಿಲ್ಲ
ಅರಳಿದಾಗ ಹೊಳೆಯುವುದು ತಿಳಿದಿಲ್ಲ
ನಾನಿಲ್ಲಿ ಕ್ಷಣಿಕ ....
ನಾ ಬಾಡಿ ಹೋದರೆ ಬೆಳಗಾಗಿ ಮತ್ತೆ ಹುಟ್ಟಿ ತರುವೆ
ನನ್ನಂತಹ ಸೌಂಧರ್ಯವ ಆದರೆ ಅದು ನಾನಲ್ಲ
ನಾ ಬಿಟ್ಟು ಹೋದ ಜಾಗವಷ್ಟೆ.....॥
ಇನ್ನು ನಾವಿಲ್ಲಿ ಕ್ಷಣಿಕ ಹೊಳೆದಿದ್ದೆಲ್ಲ ಕೇವಲ ಕಾಲ್ಪನಿಕ
ನಮ್ಮ ಕಲ್ಪನೆಗಳು ಮಾತ್ರ ಸುಂದರ .. ಸುಂದರ
ಬಹುದೂರದಾಚೆ ಕಡಲಲಿ ಹೊತ್ತು ಮುಳೊಗೊ ಮುನ್ನ
ಮತ್ತೆ ಯಾಕೆ ಈ ಬೇಸರ ಉದಯಿಸೊ ರವಿ ಕಂಡು....॥
ತಪ್ಪಿ ಹೋದಿತೆ ಕೈಚೆಲ್ಲಿ ಚಿಂತಿಸುವುದೇಕೆ ಯಾರಿಗಾಗಿ
ಅರಳೊ ಮಲ್ಲಿಗೆ ಬಾಡಿ ಹೋದ ಕಾಲಕೆ
ನಾವೆಲ್ಲ ಇಲ್ಲಿ ಕ್ಷಣಿಕ ನಮ್ಮ ಕಲ್ಪನೆಯಲಿ ನಾವು ಕಾಲ್ಪನಿಕ...
ಸೃಷ್ಟಿ ಕರ್ತನೆ ಈ ಜಗದ ನಿರ್ವಾಹಕ
ನಿರ್ಣಯವೆ ಅಂತಿಮ ನಾವಿನ್ನು ಅವನ ಕೈಬೊಂಬೆಗಳು ಮಾತ್ರ ....ಈ ಜೀವನ ॥
****ಧನ್ಯವಾದಗಳೊಂದಿಗೆ****
>ನಾನಿನ್ನು ಚಿಕ್ಕ ಮೀನು<
ಸಾಹಿತ್ಯ ಸಾಹಿತಿಗಳ ಬಲೆಯಲಿ
ನನ್ನದು ಕಿರು ವಾಚನ......
***ವಿಶು(ವೀರೇಶ) ಅಂಗಡಿ ***
- Wishu@
05 Nov 2020, 06:23 pm
Download App from Playstore: