ನೆನಪಿನಂಗಳ
ಸುಂದರ ಹೂವಿನ ಹಂದರದೊಳಗೆ
ಮರೆಯಲಿ ನಾಚುತ ಕಿರು ನಗೆ ಚಲ್ಲಿ
ಪರದೆಯ ಮರೆಯಲಿ ಜಾರುತ ನಿಂತ
ಕುಸುಮವೆ ಕಾಡಿದೆ ನಿನ್ನಯ ನೆನಪು //ಪ//
ಪ್ರೇಮ ಪಯಣದ ದಾರಿಯ ತೋರಿ
ಪ್ರೀತಿಯ ಅಮೃತ ಬಳ್ಳಿಯ ಬೆಳೆಸಿ
ಸುಮಧುರ ಇಂಪಿನ ಕಂಪನು ಬೀರಿದ
ಕೋಮಲ ಸುಮವೆ ನಿನ್ನಯ ನೆನಪು //ಚ//೧//
ಕಣ್ಣಿನ ಸನ್ನೆಯ ಸುಳಿಯಲಿ ಸಿಲುಕಿಸಿ
ಸುಮ್ಮನೆ ನಗುತಲಿ ನೆನಪಲಿ ಉಳಿದೆ
ಒಲವಿನ ಮುತ್ತಿನ ಮಾತಿನ ಒಗಟಿನ
ಹೋಳಿಗೆ ನೀಡಿದ ನಿನ್ನಯ ನೆನಪು //೨//
ಸಾಗರದಲೆಯ ತಂಗಾಳಿಯ ಹಾಗೆ
ಮನದಲಿ ಮೂಡಿದೆ ಮಲ್ಲಿಗೆಯಂತೆ
ಕಾಲ್ಗಳ ಗೆಜ್ಜೆಯ ಕುಣಿತಕೆ ಕರಗಿದ
ನನ್ನಯ ಹೃದಯದಿ ನಿನ್ನಯ ನೆನಪು //೩//
ಜೀವ ಭಾವಗಳ ಸಂಗಮಗೊಳಿಸಿ
ಸುಂದರ ಬದುಕಿಗೆ ಮುನ್ನುಡಿ ಬರೆದ
ಸಂಗಾತಿ ಯಾಗುವ ಕನಸನು ಕಂಡು
ಉಸಿರಲಿ ನೇನೆಸುವ ನಿನ್ನ ನೆನಪು //೪//
ಕಲ್ಮೇಶ ಬಡಿಗೇರ
........ಬಾದಾಮಿ.....
- Kalmesh Badiger
08 Nov 2020, 09:05 am
Download App from Playstore: