ಸೊಗಸು
ಆಸೆ ಇಷ್ಟ
ಮಾತು ಸುಲಭ
ಕನಸು ಚಂದ
ನನಸು ಕಷ್ಟ
ಬಯಸಿದ ಆಸೆಗಳು
ಕಂಡ ಕನಸುಗಳು
ಕೊಟ್ಟ ಮಾತು
ಪಯಣದ ದಾರಿಯಲ್ಲಿ
ನನಸಾದರೆ
ಚಂದವಯ್ಯ ಚಂದ
ಆಸೆಗಳು ಕನಸಾಗಿ
ಕನಸುಗಳು ನನಸಾಗದಿದ್ದರೆ
ಆಡಿದ ಮಾತು ಪಟ ಪಾಡು
ಯತ್ನ ಪ್ರಯತ್ನಗಳು
ವ್ಯರ್ಥವಯ್ಯ ವ್ಯರ್ಥ
ಮನದ ಆಸೆಗಳು ಸಾವಿರರು
ಕಂಡ ಕನಸುಗಳು ನೂರಾರು
ಆಡಿದ ಮಾತು ಹತ್ತಾರು
ಪಯಣದ ಹಾದಿ ಹಲವರಿದ್ದರು
ಗುರಿ ಮುಟ್ಟುವ ದಾರಿ
ಒಂದೇ ಒಂದೇ ಆಗಿರಲಿ
- ರಾಜು ಹಾಸನ
09 Nov 2020, 11:22 am
Download App from Playstore: