ನಾ ಕಂಡ ಹಂಪಿ
ಬೀದಿಯಲಿ ಹೆಣವಾಗಿ ಬಿದ್ದ ಕಲ್ಲುಗಳು
ಕೊರೆದ ಕಂಬಗಳನು ಮುರಿದ ನೋವು
ಎದೆಸೀಳಿ ನಿಲ್ಲಿಸಿದ ಬಯಲು ಆಲಯ
ನೆತ್ತಿಯೋಡೆದು ಉರುಳಿಸಿದ ಗೋಪುರ
ಇಡಿಗಲ್ಲು ಕಡೆದು ಕೆತ್ತಿದ ಕಲಾಕೃತಿಗಳನ್ನು
ಸಾಹಿತ್ಯ ವಿಜ್ಞಾನ ಕಲೆ ಸಂಸ್ಕೃತಿಗಳ ನಾಶ
ಕಣ್ಣೀರು ಕರಗಿ ಕರೆಯೊಂದು ತೋರುತಲಿ
ಅಳಿದುಳಿದ ಕಥೆ ಹೇಳ್ತಾ ನಿಂತದ್ದು ಕಂಡೆ
ಸುತ್ತ ಸುಲ್ತಾನರ ನಡುವೆ ದಿಟ್ಟ ಧೈರ್ಯದಿ
ಹೊನ್ನ ಸೂಸುವ ವಿಜಯ ಸಾಮ್ರಾಜ್ಯ ಕಟ್ಟಿ
ದುಷ್ಟರನು ಸೆದೆಬಡಿದು ತಲೆ ಎತ್ತಿ ನಿಂತದ್ದು ದುಷ್ಕೃತ್ಯಕೆ ಬಲಿಯಾಗಿ ಬರಿದಾದ್ದ ಕಂಡೆ
ಮತ್ತೆ ಕಟ್ಟುವರೆಂದು ಮರಗುತ್ತ ಕೊರಗುತ್ತಾ ಕಲ್ಲಿನಲಿ ಹೊನ್ನ ಕಥೆ ಹೇಳ್ತಾ ನಿಂತಿಹವು
ಸಪ್ತ ಸಾಗರದಾಚೆ ಪಸರಿಸಿದ ಕೀರ್ತಿಯನು
ಹೊಂಚಾಕಿ ಚಿವುಟಿ ಹಾಳು ಗೆಡುಹಿದ ಕಂಡೆ
ಬಂದರೊಬ್ಬ ಯೋಗಿ ಬಿಷ್ಟಪ್ಪಯ್ಯ ನವರು
ಹಂಪಿಯ ವಿರೂಪಾಕ್ಷ ನಿಗೆ ಗೋಪುರ ಕಟ್ಟಿ
ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡಿ
ಜನಸಾಗರದ ಜಾತ್ರೆಯ ಮಾಡಿದ್ದು ಕಂಡೆ
ಕಲ್ಮೇಶ ಬಡಿಗೇರ
..........ಬಾದಾಮಿ......
- Kalmesh Badiger
11 Nov 2020, 01:00 pm
Download App from Playstore: