ಮಲೆನಾಡ ಮನೆ
ಬೆಟ್ಟಗುಡ್ಡಗಳ ನಾಡು
ಅದುವೇ ನಮ್ಮ ಮಲೆನಾಡು
ಮಲೆಗಳ ಆವರಿಸಿದ ಮಳೆಕಾಡು
ಇದು ಅಂದದ ಚೆಂದದ ಬೀಡು.
ಒಮ್ಮೆ ಇಲ್ಲಿ ಬಂದು ನೋಡು
ಆದರೆ ಕೊಂಚ ದಿನ ನೆಲೆಸಿಬಿಡು
ಇದು ಸೊಬಗಿನ ಹಾರುಗಗಳ ಗೂಡು
ಇದು ಹಸಿರಿನ ಉಸುರಿನ ಕಾಡು.
ತಣ್ಣನೆ ಗಾಳಿ ಬೀಸಿ ತೂಗುವ ತೊಟ್ಟಿಲು
ಹೆಮ್ಮರಗಳು ಕೈ ಚಾಚಿವೆ
ಬಾನನು ಮುಟ್ಟಲು..
ಕಗ್ಗಾಡು ತುಂಬಿಹುದು ಸುತ್ತಮುತ್ತಲು..
ಗುಡುಗು ಸಿಡಿಲಿಗೆ ಇಣುಕುವ ಅಣಬೆ
ಮಳೆ ಹೊಳೆ ತುಂಬಲು ಹತ್ತುವ ಮೀನು
ದೊಡ್ಡಬ್ಬ ಮುಗಿದರೆ ಹೊರಡುವರು
ಸೋಬೇಟೆಗೆ..
ಹಂದಿ, ಕಡವೆ, ಕಾಡು ಕುರಿ ಬ್ಯಾಟೆಗೆ..
ಎಂತಹ ಪುಣ್ಯವಂತರಣ್ಣ ಇಲ್ಲಿನ ಮಂದಿ
ಸ್ವರ್ಗದ ತುಣುಕನ್ನು ತಾವೇ ಹೊಂದಿ
ಊರಿಗೊಂದು ಮನೆ ಕಟ್ಟಿ
ಮಾರಿಗೊಂದು ಅಡಿಕೆಯ ನೆಟ್ಟಿ..
ಇದು ಸೃಷ್ಟಿಯ ಸೊಬಗಿನ ಮಡಿಲು
ಇದ್ದರೆ ಸಾಕಿಲ್ಲೊಂದು ಪುಟ್ಟ ಗುಡಿಸಲು..
- ಶ್ರೀಗೋ.
13 Nov 2020, 10:37 am
Download App from Playstore: