ಜನನಾಯಕ

ಬರಗಾಲ ಜಲ ಪ್ರವಾಹ
ಬಂದರೆ ಕಾಸಿಲ್ಲ ದುಡ್ಡಿಲ್ಲ
ಜನ ನಾಯಕರ
ಕಳ್ಳ ಖಜಾನೆಯಲ್ಲಿ
ಕುರ್ಚಿಗಾಗಿ ಖರ್ಚು
ಮಾಡುವರು ಕೋಟಿಗಟ್ಟಲೆ
ಪಟ್ಟಾಭಿಷೇಕಕ್ಕೆ
ಸುರಿದು ಎರಚುವರು
ಕಳ್ಳ ಖದೀಮರು
ಕಳ್ಳ ಕಣಜದ ಕಾಸಿನ ರಾಶಿ

ಜನ ಸಾಮಾನ್ಯರಿಗೆ
ಯಾವ ಭದ್ರತೆಯು ಇಲ್ಲ
ಕಳ್ಳ ಸುಳ್ಳ ನಾಯಕರಿಗೆ
ಇರುವುದು ಎ ಬಿ ಸಿ ಡಿ ಭದ್ರತೆ
ವರ್ಷವಿಡಿ ಅನ್ನ ಹಾಕುವ
ರೈತನಿಗಿಲ್ಲ ಒಂದಿಷ್ಟು ಗೌರವ
ಜನರಿಂದಲೇ
ಜನನಾಯಕರ
ಪಟ್ಟ ಕಟ್ಟಿಕೊಂಡು
ಜನರನ್ನೆ ಕಿತ್ತು ತಿನ್ನುವ
ನೀಚರಿಗೆ ಇರುವುದು
ಸಕಾಲ ಸತ್ಕಾರ ಗೌರವ
ಇದು ಏನು ಧರ್ಮವೂ
ಎಂತಹ ಮರ್ಮವೂ

- ರಾಜು ಹಾಸನ

13 Nov 2020, 11:02 pm
Download App from Playstore: