ಹಣೆಬರಹ
ತನ್ನ ಮಗಳನ್ನೇ
ಮದುವೆಯಾದ
ನೀಚ ದೇವರು
ತನ್ನ ಹಣೆಬರಹವನ್ನೆ
ತಾನೇ ನೆಟ್ಟಗೆ
ಬರೆದುಕೊಳ್ಳಲಾಗದ
ಅನಿಷ್ಠ ದೇವರು
ಗೀಚಿರುವುದಂತೆ
ಜನರ ಹಣೆಬರಹ
ಯಾವನೋ ಅವನು
ಎಂತಾ ಮುಟ್ಟಳನಿರಬೇಕು
ಹಾಗೇ ಹೀಗೆಂದು
ಕಾಗಕ್ಕ ಗುಬ್ಬಕ್ಕನ
ಕಥೆಯ ಕಟ್ಟಿದವನು
ಅದನ್ನೇ ನಂಬಿದವನು
ಇನ್ನೆಂತಹ ಮುಟ್ಟಳ
ಮೂರ್ಖನಿರಬೇಕಯ್ಯ
ಯಾರ ಹಣೆಬರಹವನ್ನು
ಯಾರು ಬರೆಯುವುದಿಲ್ಲ
ಎಲ್ಲರ ಹಣೆಬರಹವು
ಯಾವ ದೇವರ ಕೈಯಲ್ಲಿಲ್ಲ
ಅವರವರ ಹಣೆಬರಹ
ಅವರವರ ನಡೆ ನುಡಿ
ಕಾಯಕದಲ್ಲಿರುವುದು
ತಿಳಿಯೋ ಮನುಜ
- ರಾಜು ಹಾಸನ
16 Nov 2020, 11:30 pm
Download App from Playstore: