ಮೊದಲ ಮಳೆ
ಧರೆ ಒಣಗಿ ದೂಳೆದ್ದು ಹಾರಿರಲು
ಉರಿಬಿಸಿಲು ಸೊರಗಿ ಕರಗಿರಲು
ಮೋಡಗಳು ಅಪ್ಪಿ ಮುತ್ತಿಕ್ಕಲು
ಧರೆಗೆ ಉದುರಿತು ಮೊದಲ ಮಳೆ
ತುಂತುರು ಮಳೆಹನಿಯ ಆಟದಲಿ
ತವಕದಲ್ಲಿ ಹೊರಬಂದು ಕುಣಿದು
ಕಣ್ಮನವ ತಣಿಸಿ ಕೇಕೆಯನು ಹಾಕಿ
ಕರುಣದಲಿ ಕೈ ಮುಗಿದರು ರೈತಜನ
ಸಂಗಾತಿಯ ಗುಂಗಿನಲಿ ಹುಚ್ಚಾದವ
ಇನಿಯನ ಬರುವಿಕೆಯ ಕಾದು ನಿಂತ
ಹಸಿ ಬಿಸಿಯ ಪ್ರೇಮಿಗಳ ಮನಸಿನಲಿ
ಹೊಸ ಗೀತೆ ಹಾಡಿಸಿದ ಮೊದಲ ಮಳೆ
ಕುಪ್ಪಳಿಸಿ ಕುಣಿದು ಧನಿದ ಚಿಣ್ಣರಿಗೆ
ಸಿಹಿ ನೀಡಿ ಅಮ್ಮ ಮುದ್ದಿಸುತಿರಲು
ಮೇಘರಾಜನೆ ಸೋತು ಮಗುವಾಗಿ
ಧೇರೆಗಿಳಿದು ಕರಗಿ ನೀರಾಗಿ ಹರೆದ
ಭುವಿಯ ಜೀವಗಳೆಲ್ಲ ಬಾಯ್ತೆರೆದು
ಮೊದಲ ಮಳೆಹನಿಯ ರುಚಿ ಸವೆದು
ತುಂತುರು ಮಳೆಹಾಡಿನಲಿ ನಲಿ ನಲಿದು
ದೇವನಲಿ ಧನ್ಯವಾದಗಳ ಅರ್ಪಿಸಿದವು
ಕಲ್ಮೇಶ ಬಡಿಗೇರ
9743539657
......ಬಾದಾಮಿ...
- Kalmesh Badiger
17 Nov 2020, 05:35 pm
Download App from Playstore: