ಮೋಡಗಳೊಡನೆ
ನೀಲವರ್ಣ ಆಗಸದ ಕೆಳಗಡೆ
ಕಣ್ಣಾಮುಚ್ಚಾಲೆ ಆಡುತ್ತಿರುವ
ಕಪ್ಪು ಬಿಳಿಯ ಬಣ್ಣ ಹೊದ್ದ
ಮೋಡಗಳೆ ಹೇಳಿ ನೀವ್ಯಾರು
ಒಮ್ಮೆ ಮಗುವಾಗಿ ಕಾಣುತಲಿ
ಮತ್ತೆ ಗುರುವಾಗಿ ಕಾಣುತಲಿ
ಚಂದದ ಚಿತ್ತಾರ ಮೂಡಿಸುವ
ಬೆಳ್ಳಿಯ ಮೋಡಗಳೆ ನೀವ್ಯಾರು
ಕೃಷ್ಣನ ರಥ ಕುದುರೆಯ ತೋರಿ
ಬೆಟ್ಟ ಗುಡ್ಡಗಳ ಆಕೃತಿ ನಿರ್ಮಿಸಿ
ಸುರಿವ ಜಲಧಾರೆಯ ಮುದ್ರಿಸಿ
ಚಲಿಸುವ ಮೋಡಗಳೆ ನೀವ್ಯಾರು
ಸಾಗರದ ಮೇಲಿಂದೆದ್ದು ಬಂದು
ಸೂರ್ಯ ಚಂದ್ರಮರನು ಮುಚ್ಚಿ
ಬಿರುಗಾಳಿಗೆ ಬರಸಿಡಿಲು ಸಿಡಿಸಿ
ಮಳೆಯ ಸುರಿಸುವ ನೀವ್ಯಾರು
ಆಸ್ತಿಕರಿಗೆ ದೇವರಾಗಿ ಗೋಚರಿಸಿ
ನಾಸ್ತಿಕರ ಭಾವದಲಿ ಹೊಗೆಯಾಗಿ
ವಿಜ್ಞಾನಿಗಳಿಗೆ ನೀರಾವಿ ಎಂತೇನಿಸಿ
ಚಲಿಸುವ ಮೋಡಗಳೆ ನೀವ್ಯಾರು
ಕಲ್ಮೇಶ ಬಡಿಗೇರ
9743539657
.......ಬಾದಾಮಿ.....
- Kalmesh Badiger
18 Nov 2020, 05:27 pm
Download App from Playstore: