ಬುಡು ಬುಡುಕೆ
ಜಾತಕ ಹೇಳುವರು ಜಾತಕ
ಬುಡು ಬುಡುಕೆ ಜಾತಕ
ಡೊಳ್ಳು ಹೊಟ್ಟೆಯ ಹೊತ್ತ
ಕಳ್ಳ ಜ್ಯೋತಿಷಿಗಳ
ಹೊಟ್ಟೆಪಾಡಿನ ಜಾತಕ
ಮೈ ಬಗ್ಗಿಸಿ ದುಡಿಯಲಾಗದೆ
ಪರರ ಹಣೆಗೆ ಪಂಗನಾಮ ಹಾಕಿ
ಕುಂತು ತಿನ್ನುವ ಜುಟ್ಟು ಜನಿವಾರ
ಕಟ್ಟಿಕೊಂಡು ಪುಂಗಿ ಊದುವ
ಸೋಂಬೇರಿಗಳ ಪರಮ ಕಾಯಕ
ಅವರವರ ಜಾತಕ
ಅವರವರಿಗೆ ಗೊತ್ತಿಲ್ಲಾ
ಆದರು ಹೇಳುವರು
ಕಂಡ ಕಂಡವರ ಜಾತಕ
ಅದನ್ನೇ ನಂಬಿ ಕುಣಿಯುವ
ಜನರು ಇನ್ನೆಂತಹ
ಬುಡು ಬುಡುಕೆಗಳಿರಬೇಕು
- ರಾಜು ಹಾಸನ
18 Nov 2020, 09:17 pm
Download App from Playstore: