ಕನ್ನಡ

ನಾವೆಲ್ಲ ಕನ್ನಡ ನೀವು ಕನ್ನಡ
ಹೃದಯ ಮನಸುಗಳೆಲ್ಲ ಕನ್ನಡ
ಬೆಳೆವಾ ಭೂಮಿಯಲಿ ಕನ್ನಡ
ನಮ್ಮತಾಯಿಯ ಭಾವ ಕನ್ನಡ

ನಡೆ ಕನ್ನಡ ನುಡಿಯು ಕನ್ನಡ
ಮಣ್ಣು ಹೊನ್ನೀನಲಿದೆ ಕನ್ನಡ
ದಿನ ಬಳಕೆಯ ಮಾತು ಕನ್ನಡ
ಮುದ್ದುಮಕ್ಕಳ ಮಾತು ಕನ್ನಡ

ರಾಜ್ಯ ಸಾಮ್ರಾಜ್ಯಗಳು ಕನ್ನಡ
ಆಳಿದ ಅರಸರ ಹೆಸರು ಕನ್ನಡ
ಕಟ್ಟಿದ ಗುಡಿಗೋಪುರವು ಕನ್ನಡ
ಕುಟ್ಟಿ ಕೆತ್ತಿದ ಶಿಲ್ಪಗಳೆಲ್ಲ ಕನ್ನಡ

ಸಂಗೀತ ನೃತ್ಯ ಕಲೆಗಳಲಿ ಕನ್ನಡ
ಆಟೋಟ ಪಾಟಗಳಲ್ಲಿ ಕನ್ನಡ
ಸಾಹಿತಿಗಳ ಸಾಹಿತ್ಯದಲ್ಲಿ ಕನ್ನಡ
ವಿಜ್ಞಾನ ಆವಿಷ್ಕಾರಗಳಲಿ ಕನ್ನಡ

ರೋಮ ರೋಮದಲ್ಲಿ ಕನ್ನಡ
ಹೃದಯಬಡಿತ ಉಸಿರು ಕನ್ನಡ
ಭುವನೇಶ್ವರಿಯ ನೆನೆವ ಕನ್ನಡ
ತಾಯ ನೆನೆಯುತ ಹೇಳಿ ಕನ್ನಡ

ಜೈ ಕನ್ನಡಾಂಬೆ

ಕಲ್ಮೇಶ ಬಡಿಗೇರ
೯೭೪೩೫೩೯೬೫೭
.....ಬಾದಾಮಿ....

- Kalmesh Badiger

19 Nov 2020, 12:40 pm
Download App from Playstore: