ಸ್ವಾರ್ಥಿಗಳ ಪ್ರಪಂಚ
ಕೇಳುವವನು
ಹೇಳುವವನು
ಒಬ್ಬನೇ ಆದರೂ
ಕಂಡ ಕಂಡಲ್ಲಿ
ಹೊಗಳಿ ತೆಗಳಿ
ಮಾತನಾಡಿ ಮರುಳು
ಮಾಡುವವರು
ಹಲವು ಜನ
ಹತ್ತಾರು ಜನ
ಹತ್ತಾರು ತರ
ನೂರಾರು ಜನ
ನೂರಾರು ತರ
ಮಾತನಾಡುವರೇ
ಹೋರೆತು
ಯಾರು ಕೂಡ
ಒಂದೇ ರೀತಿ
ಒಂದೇ ಸಮ
ಯೋಚಿಸಿ
ಆಲೋಚಸಿ
ಮಾತನಾಡುವ
ಜನರಿಲ್ಲ ಈ
ಪ್ರಪಂಚದಲ್ಲಿ
ಸ್ವಾರ್ಥವೇ
ತುಂಬಿರುವ
ಸ್ವಾರ್ಥಿಗಳ
ಕೆಟ್ಟ ಪ್ರಪಂಚವಿದು
ಯಾರೇ ಏನೇ ಎಷ್ಟೇ
ಮಾತನಾಡಿದರೂ
ನಿನ್ನ ನಡೆ ನುಡಿ
ಬದಲಾಯಿಸಿಕೊಳ್ಳದೆ
ಮುನ್ನುಗ್ಗಿ ನಡೆ
ನಿನ್ನ ದಾರಿಯ ಕಡೆ
ನೀ ಎದೆಗುಂದದೆ
ಬದುಕಿ ಬಾಳು
ಮುಗಿಲೆತ್ತರಕ್ಕೆ
ನೀ ಮಾನವನಾಗಿ
ನಿಸ್ವಾರ್ಥಿಯಾಗಿ
ಓ ಮನುಜ
- ರಾಜು ಹಾಸನ
23 Nov 2020, 01:07 pm
Download App from Playstore: