ಓ ನನ್ನ ಮನಸೇ

ಯಾರು ನಿನ್ನವರಲ್ಲ
ನಿನಗಾಗಿ ನೀನೇ ಹೊರೆತು
ನಿನಗಾಗಿ ಯಾರು ಅಲ್ಲ
ಕಂಡವರ ಮಾತಿಗೆ
ಮರುಳಾಗಿ ಮೈ
ಮನ ಮರೆಯಬೇಡ
ತೋಳ ಬಲ ಜನ ಬಲ
ಇದ್ದರೆ ಹಿಡಿಯುವರು
ನಿನ್ನ ಕೈ ಕಾಲು
ಇಲ್ಲದಿದ್ದರೆ ಜಾಡಿಸಿ
ಒದೆಯುವರು
ನಿನ್ನ ಸ್ವಾಭಿಮಾನಕ್ಕೆ
ನಾನು ನನ್ನದೇನ್ನುವ
ಜನ ಜಾತ್ರೆಯಲ್ಲಿ ನಿಂತು
ನನ್ನವರು ನನ್ನವರೆಂದು
ಕೂಗಿ ಗೋಗರೆಯುವ
ಹುಚ್ಚು ಯಾತಕೆ
ಓ ನನ್ನ ಮನಸೇ

- ರಾಜು ಹಾಸನ

23 Nov 2020, 07:59 pm
Download App from Playstore: