ಹುಚ್ಚು ಕುದುರೆ

ಹುಚ್ಚು ಕುದುರೆ
ಹುಚ್ಚು ಕುದುರೆ
ಓಡುತ್ತಿರುವುದು
ವರದಕ್ಷಿಣೆಯ
ಬಾಲ ಹಿಡಿದು
ದಕ್ಷಿಣೆ ಕೊಟ್ಟರೆ
ನಿಲ್ಲುವುದು
ಕೊಡದಿದ್ದರೆ
ಓಡುವುದು
ಅಕ್ಕ ಪಕ್ಕದ
ಊರು ಊರು
ಹುಚ್ಚು ಕುದುರೆ

ಮದುವೆ ಎಂದರೆ
ಕನಸು ಮನಸುಗಳ
ಒಪ್ಪಂದವೇ ಹೋರೆತು
ಹಣ ಕಾಸಿನ ಒಪ್ಪಂದವಲ್ಲ

ಜೂಜು ಕಟ್ಟುವರು
ಮೋಜು ಮಾಡುವರು
ಹೆಣ್ಣು ಗಂಡಿನ
ಕುದುರೆಯ ವ್ಯಾಪಾರ
ಮಾಡಿ ಮುಗಿಸುವರು
ಹಣದ ತಟ್ಟೆ ತೂಗಿ

ವರದಕ್ಷಿಣೆ ಇಟ್ಟರೆ
ಕಟ್ಟುವರು ಮೂರು ಗಂಟು
ಇಡದ್ದಿದ್ದರೆ ಇಡುವರು
ಪಕ್ಕದೂರಿಗೆ ನೂರು ಹೆಜ್ಜೆ
*********ರಾಜು ಹಾಸನ********

- ರಾಜು ಹಾಸನ

24 Nov 2020, 11:32 pm
Download App from Playstore: