ಧರ್ಮ ಕೋಟೆ

ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು
ಮನುಷ್ಯ ಮನುಷ್ಯರ
ಕೊಂದು ತಿನ್ನುವ
ರಕ್ತ ಹೀರುವ
ಬದುಕಲು ಬಿಡದ
ಜಾತಿ ಧರ್ಮ
ಯಾರಿಗೆ ಬೇಕು
ಯಾತಕ್ಕೆ ಬೇಕು

ಮನುವಾದಿಗಳ
ಷಡ್ಯಂತ್ರದ ಉದ್ದರದ
ಕಳ್ಳ ಖಜಾನೆಯ ಕೋಟೆ
ಸುಖದ ಸುಪ್ಪತ್ತಿಗೆಯ
ಜಾತಿ ಧರ್ಮದ
ಮತ ಕೋಟೆ

ಯಾರಿಗು ಬೇಡ
ಯಾತಕ್ಕೂ ಬೇಡ
ಯಾವ ಜಾತಿ
ಧರ್ಮದ ಮತ ಕೋಟೆ
ಉಳಿದು ಬೆಳಯಲಿ
ಜನರ ಪ್ರೀತಿಯ
ಮಾನವ ಧರ್ಮದ
ಮಹಾ ಕೋಟೆ

ಜಾತಿ ಧರ್ಮ
ತಲೆ ಎತ್ತಿದಾಗ
ಸತ್ತು ಹೋಗುವುದು
ಮಾನವ ಕುಲ ಕುಲ
ಬೀಳುವುದು
ಸತ್ತ ಹೆಣಗಳ ರಾಶಿ
ಹರಿಯುವುದು
ರಕ್ತ ಕಣ್ಣೀರಿನ ಕೋಡಿ

ಸತ್ತು ಕೆಟ್ಟರೆ ಯಾವ
ಜಾತಿ ಧರ್ಮದವು
ಬರುವುದಿಲ್ಲ
ಹೋರುವುದಿಲ್ಲ
ಹೋಗುವುದಿಲ್ಲ
ಸತ್ತವರ ಹಿಂದೆ ಹಿಂದೆ
ಆದರು ಕಟ್ಟುವರು
ನೂರೆಂಟು ಜಾತಿ ಧರ್ಮವ
ಸತ್ತು ಸಮಾಧಿ
ಆಗುವ ತನಕ
ಸುಟ್ಟು ಬೂದಿ
ಆಗುವ ತನಕ

ಜನರ ಜನರ
ನಡುವೆ ಜಾತಿ ಧರ್ಮದ
ವಿಷ ಬೀಜ ಬಿತ್ತಿ
ಜಾತಿ ಧರ್ಮದ ಅಡ್ಡಗೋಡೆ
ಕಟ್ಟಿರುವರು ದುಷ್ಟ
ಮನುವಾದಿ ಕುನ್ನಿ ಮರಿಗಳು
ಕೆಡವಿ ಉರುಳಿಸಬೇಕು
ಮನುವಾದಿಗಳ ಜಾತಿ
ಧರ್ಮದ ಅಡ್ಡಗೋಡೆ
ಅಧರ್ಮದ ಮತ ಕೋಟೆ

ಬದುಕಿ ಬಾಳಬೇಕು
ಮನುವಾದಿಗಳ
ಎಡೆಮುರಿ ಕಟ್ಟಿ
ಹೊಡೆದು ಕಟ್ಟಬೇಕು
ಮಾನವ ಧರ್ಮದ
ಮಹಾ ಕೋಟೆ

- ರಾಜು ಹಾಸನ

25 Nov 2020, 04:30 pm
Download App from Playstore: