ಶೂನ್ಯ ಶೂನ್ಯ
ಅಪ್ಪ ಅವ್ವ
ಅಪ್ಪ ಅವ್ವನ
ಪ್ರೀತಿಯೊಂದು
ಇದ್ದರೆ ಸಾಕು ನನಗೆ
ಸಾವಿರ ಆನೆ ಬಲ
ಬಂದ ಹಾಗೆ
ಇಲ್ಲದಿದ್ದರೆ
ಅಂಕು ಡೊಂಕಿನ
ನಾಯಿ ಬಾಲ
ಇದ್ದ ಹಾಗೆ ನನ್ನ ಬಾಳು
ನಾ ಕಂಡ
ಕನಸುಗಳು
ನನಸಾಗದೆ
ಉಳಿದರು
ಚಿಂತೆಯಿಲ್ಲ
ಕೈ ಜಾರಿ
ಹೋಗದಿರಲಿ
ನನ್ನ ಹಡೆದವರು
ಅವರೆಂದರೆ
ನನ್ನ ಜೀವಾ
ಅವರಿದ್ದರೆ
ನನ್ನ ಬಾಳು
ಅವರಿಗಾಗಿಯೇ
ನನ್ನ ಕಾಯಕ
ಅವರ ಖುಷಿಯೇ
ನನ್ನ ಉಸಿರು
ಅವರಿಲ್ಲದ ನನ್ನ
ಬದುಕು ಶೂನ್ಯ ಶೂನ್ಯ
- ರಾಜು ಹಾಸನ
25 Nov 2020, 07:42 pm
Download App from Playstore: