ಎಳ್ಳ ಅಮಾವಾಸ್ಯೆಯ ಚರಗ
ಬುತ್ತಿ ಕಟಗೊಂಡು ಹೊಲದಕಡೆ
ಹೊಂಟಿವಿ ಎಲ್ಲ ಚರಗವ ಚಾಲ್ಲಾಕ
ಹೂರಣದ ಕಡಬು ಹೊಳಿಗಿ ತುಪ್ಪ
ಹಾಕ್ಕೊಂಡು ಊಟವ ಜಡಿಲಾಕ
ಅವ್ವನು ಮಾಡಿದ ಎಳ್ಳಿನ ಹೋಳಿಗೆ
ಹೊಂಚಾಕಿ ತಿನ್ನಾಕಂತ ಕಾಯ್ಕೊಂತಾ
ದೇವರ ಪೂಜೆ ಬೇಗ ಮುಗಿಬೇಕಂತ
ಪ್ರಾರ್ಥನೆಯನ್ನು ಮಾಡುತ ಬೇಡುತ್ತಾ
ಜೋಳ ಕಡಲೆ ಕುಸುಬಿ ಅಗಸಿಯ
ಪೈರಿಗಳಿಗೆಲ್ಲ ನೀರನ್ನು ಸಿಂಪಡಿಸುತ್ತಾ
ಹೂರಣಗಡಬು ಹೋಳಿಗೆ ಮುರಿದು
ತುರೂತಾ ಚರಗವ ಚಲ್ಲುತ ಕೂಗಾಕ
ಹುಲ್ಲುಲ್ಲುಗೋ ಸಲಾಂಬರ್ಗೊಯ್
ಅನ್ನುತಾ ಹೊಲವೆಲ್ಲ ವನ್ನು ಸುತ್ತಾಕಾ
ತಂದಿರೋ ಬುತ್ತಿಯ ಕಾಲಿಯ ಮಾಡಿ
ಆಟವಾ ಆಡುತಾ ಒಡುತಾ ಕುಣಿಯಾಕ
ಬಣ್ಣದ ಬೊರಂಗಿ ಹಿಡಿದು ದಾರಕಟ್ಟಾಕ
ದುಡ್ಡು ಕೊಡ್ತೀನಿ ಲಾಗಾಹೊಡಿ ಅನ್ಲಾಕ್
ಕತ್ತಲಾಗುವ ಮುಂಚೆ ದಾರಿಯ ಹಿಡಿದು
ಮನೆಯನು ಸೇರಿ ಬೆಚ್ಚಗೆ ಮಲಗೋಕ
ಕಲ್ಮೇಶ ಬಡಿಗೇರ
9743539657
......ಬಾದಾಮಿ......
- Kalmesh Badiger
29 Nov 2020, 11:23 am
Download App from Playstore: