ಕ್ರಾಂತಿ
ಕ್ರಾಂತಿ ಮಾಡಲೆ ಬೇಕು ನಾವೆಲ್ಲ
ಮುರಿದ ಮನಸುಗಳಲ್ಲಿ ಒಮ್ಮೆ
ಒಡೆದ ಹೃದಯಗಳಲ್ಲಿ ಇಂದೆ
ಧಣಿದ ದೆಹಗಳಲ್ಲಿ ಈಗಲೆಯೆ
ಒಂಟಿ ಕೈಯ್ಯನು ಕಿತ್ತೊಗೆದು
ಎಂಟು ಕೈಗಳ ಒಟ್ಟಿಗೆ ಸೇರಿಸಿ
ಗರುಡ ಗಂಭವ ಕೈಲಿ ಹಿಡಿದು
ಕ್ರಾಂತಿ ಮಾಡಲೇಬೇಕು ನಾವು
ಅಜ್ಜನ ಆಲದ ಮರದಡಿಯಲ್ಲಿ
ಏಲಕ್ಕಿಯ ಗಿಡವನ್ನಾದರು ನೆಟ್ಟು
ಹೋಗು ಬರುವವರೆಲ್ಲ ನೋಡ್ವಂತೆ
ಕ್ರಾಂತಿಯ ಮಾಡಲೇಬೇಕು ನಾವೆಲ್ಲ
ಹೆಬ್ಬೆರಳಿನ ತುದಿಗಳಿಂದಲೆ ನಾವು
ಹೆಬ್ಬಾವು ಗಳನ್ನೆಲ್ಲ ಸೆದೇಬಡಿದು
ಹುಬ್ಬೇರಿಸಿ ನೋಡುವಂತೆ ಮಾಡ್ವ
ಕ್ರಾಂತಿಯ ಮಾಡಲೆ ಬೇಕು ನಾವೆಲ್ಲ
ಗಗಣದಂಚಿನ ಎತ್ತರವನ್ನು ಮೀರಿದ
ಬಗೆ ಬಗೆಯ ಆಸೆಯ ತೋರಿದಂತ
ತೆನೆ ಬಿಡುವ ಫಸಲಿನಂತೆ ನಾವುಗಳು
ಕ್ರಾಂತಿಯ ಮಾಡಲೆ ಬೇಕು ಪುಟಿದೆದ್ದು
ಕಲ್ಮೇಶ ಬಡಿಗೇರ
9743539657
......ಬಾದಾಮಿ.....
- Kalmesh Badiger
29 Nov 2020, 09:33 pm
Download App from Playstore: