ಜೀವನ
ಬಯಸದೇ ಸಿಕ್ಕಿದ್ದು
ಬಯಸಿದರೂ ದಕ್ಕದ್ದು
ಮೌಲ್ಯಕ್ಕೂ ಎಟುಕದ್ದು
ನಮ್ಮ ಜೀವನ
ನಗುವಿಹುದು
ಕೆಲವೊಮ್ಮೆ ಅಳುವಿಹುದು
ದುಃಖ, ದುಮ್ಮಾನಗಳ
ಆಗರವೂ ಹೌದು
ವೈರಾಗ್ಯ, ಮತ್ಸರ
ಮನೆ ಮಾಡಬಹುದು
ಪ್ರೀತಿ, ಪ್ರೇಮಗಳ
ಜಗವೂ ಹೌದು
ಗಿಣಿಗಳು, ಚಿಟ್ಟೆಗಳು
ಹೌಹಾರುವವು
ಬಚ್ಚಿಟ್ಟ ಹೆಂಗಿಣಿಯು
ಹಾರಿ ಹೋಗಲೂಬಹುದು
ಸುಮಧುರ ಕ್ಷಣಗಳು
ಧಾರಾಳವಿಹುದು
ಕಹಿ-ಕಹಿ ಅನುಭವ
ಉಂಟಾಗಲೂಬಹುದು
ಪ್ರೀತಿ-ಶಾಂತಿಯ ಗಳಿಸಿ
ದುಃಖಗಳ ಎದುರಿಸಿ
ತಂತ್ರ - ಜಾಣ್ಮೆಯೊಂದಿಗೆ
ಯಶಸ್ಸನ್ನೂ ಗಳಿಸಬಹುದು.
- ಶಾಹಿದ್ ಉಪ್ಪಿನಂಗಡಿ
11 Jul 2016, 11:38 am
Download App from Playstore: