ಬದುಕಿನ ಬಂಡಿ

ಜೀವನವೇ
ಜಿಗುಪ್ಸೆಯಾದರು
ಬದುಕೆ ಬೇಡ
ಎನಿಸಿದರೂ
ಏನೇ ಆದರೂ
ಹೋದರು
ಎಷ್ಟೇ ಇದ್ದರೂ
ಇಲ್ಲದಿದ್ದರೂ
ಯಾರೇ ಬಂದು
ಹೋದರು
ನಿಂತು ನಿಲ್ಲದೆ
ಕುಂತು ಕೂರದೆ
ಓಡುವುದಯ್ಯ
ಬದುಕಿನ ಬಂಡಿ

ಜೀವನ
ಹುಟ್ಟಿನಿಂದ
ಶುರುವಾಗಿ
ನೋವು ನಲಿವಿನ
ಹಾವು ಏಣಿ
ಹತ್ತಿ ಇಳಿದು
ಬಿಟ್ಟು ಬಿಡದ
ನೂರಾರು ಸಾವಿರಾರು
ಸಂಬಂಧಗಳಿದ್ದರು
ಮರೆತು ಮಲಗಬೇಕು
ಮಸಣದ
ಮಂಟಪ ಕಟ್ಟಿಕೊಂಡು
ಒಂದಲ್ಲ
ಒಂದು ದಿವಸ
ಸೇರಬೇಕು
ಮಸಣದ ಗುಂಡಿ
ಇಷ್ಟೇ ನಮ್ಮ ನಿಮ್ಮ
ಜೀವನದ ಆಟ ಪಾಠ

- ರಾಜು ಹಾಸನ

30 Nov 2020, 04:37 pm
Download App from Playstore: