ಯಾವ ಸ್ಫೂರ್ತಿಯ ಚಿಲುಮೆ
ಯಾವ ಸ್ಫೂರ್ತಿಯ ಚಿಲುಮೆ
ಅವರ ಎದೆಯಾಳದಲ್ಲಿ
ಜಿನುಗುತಿದೆ ಯೋ ಯಾರು ಬಲ್ಲರು//
ಪ್ರೀತಿ ಮಮತೆ ವಾತ್ಸಲ್ಯ
ಅಂತಃಕರಣದ ಭಾವಸ್ಪರ್ಶ ನೀಡಿ
ತನು ಮನದಿ ಸೇವೆಯಗೈದು
ಪಾಲಿಸಿ ಪೋಷಿಸಿ ಏನನ್ನೂ ನಿರೀಕ್ಷಿಸದೆ
ತನ್ನವರೆಂದು ಬಂಧು ಬಾಂಧವರೆಂದು
ದಣಿವರಿಯದೆ ದುಡಿಯುತಿಹರು ವಯೋವೃದ್ಧರು//
ಕಾಯಕದಲ್ಲಿ ತಲ್ಲೀನತೆ
ಸೇವೆಯಲ್ಲಿ ವಿನಮ್ರತೆ
ಕೊಡುಗೈಯಲ್ಲಿ ಉದಾಹರಣೆ
ನಾನೆಂಬ ಅಹಂಕಾರ ಬಿಟ್ಟು
ನಮ್ಮವರೆಲ್ಲರಿವರೂ ಎಂಬ
ಭಾವದಿ ಬದುಕುತಿಹರು
ಸಂತೃಪ್ತಿಯ ಮೊಗ ಹೊತ್ತು ಈ ವಯೋವೃದ್ಧರು//
ವೈಭವದ ಬದುಕ ಬಿಟ್ಟು
ವಾಸ್ತವದ ನೆಲೆಗಟ್ಟಿನ ಮೇಲೆ
ಭೂತದ ಅನುಭವದ ಬಾರ
ವರ್ತಮಾನದ ನಿರ್ಲಕ್ಷ ಗಳ ನಡುವೆ
ಭವಿಷ್ಯದಾತಂಕಗಳ ದಿನಗಳಲ್ಲಿ
ಬವಣೆ ಬೇಗುದಿಗಳ ನಡುವೆ
ಮುಸ್ಸಂಜೆಯ ದಿನಗಳಲ್ಲಿ
ನಗು ಮೊಗವ ಹೊತ್ತು
ಸಾರ್ಥಕ್ಯದ ಬದುಕು
ಕಳೆಯುತಿಹರುಹ ವಯೋವೃದ್ಧರು//
- MAHESH.हिन्दीशिक्षक
01 Dec 2020, 09:07 am
Download App from Playstore: