ಶ್ರೇಷ್ಠ
ವ್ಯಕ್ತಿ ವ್ಯಕ್ತಿತ್ವದಿಂದ
ಶ್ರೇಷ್ಠನೇ ಹೊರೆತು
ಉಡುಗೆ ತೊಡುಗೆ
ಹಣ ಅಂತಸ್ತು
ಮನೆ ಮಠ
ಗುಡಿ ಗೋಪುರ
ಜಾತಿ ಧರ್ಮದ
ಹುಟ್ಟಿನಿಂದ ಅಲ್ಲ
ತಿಳಿದು ತಿಳಿದು
ಕಂಡು ಕಂಡು
ಕಣ್ಣ್ ಬೆಳಕಲ್ಲೇ
ಜಾತಿ ಧರ್ಮದ
ಕೊಚ್ಚೆ ಗುಂಡಿಗೆ
ಬಿದ್ದು ಬಿದ್ದು
ಹೊರಳಾಡುವರು
ಈ ಮೂರ್ಖ ಜನರು
ಸಂವಿಧಾನ
ಕಾಯುವುದು
ನಿನ್ನ ಬದುಕು
ಜಾತಿ ಧರ್ಮ
ಕೊಲ್ಲುವುದು
ನಿನ್ನ ಬಾಳು
ತಲೆ ತಗ್ಗಿಸಿ
ನೆಡೆಯುವಂತೆ
ಮಾಡುವುದು
ನಿನ್ನ ಜಾತಿ
ಧರ್ಮದ ಮಾದ
ತಲೆ ಎತ್ತಿ ನಡೆಯುವಂತೆ
ಮಾಡುವುದು
ಸಂವಿಧಾನದ ತಾಕತ್ತು
- ರಾಜು ಹಾಸನ
01 Dec 2020, 11:32 am
Download App from Playstore: