ನಾ ಚಿರ ಋಣಿ

ನಾನು ನಂಬಿದ
ಜನರು ಬಾರದಿದ್ದರೂ
ನಾನು ಪೂಜಿಸುವ
ದೇವರು ಒಲಿಯದಿದ್ದರು
ನನ್ನ ಸುತ್ತ ಮುತ್ತ
ಇರುವ ಬಂಧು ಬಳಗ
ಸಂಬಂಧ ಬಳ್ಳಿಗಳು
ಬಂದು ಆಗದಿದ್ದರೂ
ಚಿಂತೆಯಿಲ್ಲ ನನಗೆ
ನಾ ಸೋತು ಗೆದ್ದರು
ನಾ ಸತ್ತು ಕೆಟ್ಟರು
ಸತ್ತು ಸಮಾಧಿಯಾದರು
ನನ್ನ ಕೋನೆ ತನಕ
ಎಡೆಬಿಡದೆ ಕೈ ಬಿಡದೆ
ನನ್ನೊಂದಿಗೆ
ಬದುಕಿ ಬಾಳುವ
ನನ್ನ ತಂದೆ
ತಾಯಿಗಳಿದ್ದರೆ ಸಾಕೆನಗೆ
ಯಾವ ಪ್ರಪಂಚ
ಸಿರಿ ಸಂಪತ್ತು ಬೇಡೆನಗೆ
ನನ್ನ ತಂದೆ ತಾಯಿಗಳೆ
ನನಗೆ ದೊಡ್ಡ ಪ್ರಪಂಚ
ಅವರೆ ನನಗೆ
ಮುಗಿಯಾದ ಸಿರಿ ಸಂಪತ್ತು

ನನ್ನ ಬದುಕಿನ
ಪಯಣದ ದಡ ಸೇರಿಸಿದ
ನನ್ನ ಬದುಕಿನ
ನಾವಿಕರು ನಾಯಕರು
ನಾ ಪೂಜಿಸಿ ಆರಾಧಿಸುವ
ನನ್ನ ಮನದ ದೇವರು
ನನ್ನ ತಂದೆ ತಾಯಿಗೆ
ನಾ ಚಿರ ಕಾಲ ಚಿರ ಋಣಿ
*******ರಾಜು ಹಾಸನ********

- ರಾಜು ಹಾಸನ

01 Dec 2020, 11:27 pm
Download App from Playstore: