ದೀಪೋತ್ಸವ

ಎಲ್ಲಿ ನೋಡಿದರಲ್ಲಿ
ಬೆಳಕಿನ ಹೊನಲು
ದೀಪ ಮಾಲೆಗಳ
ತೂಗುಯ್ಯಾಲೆ
ನೋಡಲು ಬರಿ
ಕಣ್ಣ್ ಗಳೆರಡು
ಸಾಲದಯ್ಯ
ದೀಪ ಪುಂಜಗಳ
ಸರಮಾಲೆ
ಕಣ್ಣ್ ಮನ ತಣಿಸುವ
ಸೋಬಗಿನ
ವೈಯರದ ಬೆಡಗಿನ
ದೀಪಗಳ ಅಲಂಕಾರ
ಆಗಸಕ್ಕೆ ರಂಗು ಚೆಲ್ಲಿ
ಚುಕ್ಕಿ ತಾರೆಗಳಿಗೆ
ನಾಚಿಸುವ ರಂಗು ರಂಗಿನ
ದೀಪಗಳ ಚಿತ್ತಾರ
ಸವಿಯಲು ಅಂದ ಚಂದ
ದೀಪ ದೀಪಗಳ
ದೀಪೋತ್ಸವ

- ರಾಜು ಹಾಸನ

02 Dec 2020, 04:08 pm
Download App from Playstore: