ನನ್ನ ಗೆಳೆಯ ನನ್ನ ಗೆಳೆಯ

ನನ್ನ ಗೆಳಯ‌ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ಪ್ರೀತಿ ಪ್ರೇಮದ ಚಿಟ್ಟೆ
ನೀ ಹಿಡಿಯಲು ಹೋಗಿ
ಕೈ ಕಾಲು ಮುರಿದು ಬಿದ್ದೆ
ಪ್ರೀತಿ ಪ್ರೇಮದ ಚಿಟ್ಟೆ
ಹಾರಿ ಹೋಯಿತು ನಿನ್ನ ಬಿಟ್ಟು
ನಿನ್ನೆದೆಯೊಳಗಿನ ನಿನ್ನೂಸಿರಿನ
ಚಿಟ್ಟೆ ಬಿಟ್ಟು ಹಾರಿ
ಹೋಗುವ ಮುನ್ನ
ಮರಳಿ ಬಂದು ಸೇರಿಕೋ
ನಿನ್ನ ಒಲವಿನ ಗೂಡು

ನನ್ನ ಗೆಳಯ‌ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ನಿನ್ನ ಪ್ರೀತಿ ಪ್ರೇಮದ ಚಿಟ್ಟೆ
ಖುಷಿಯಾಗಿರುವುದು
ಪಂಜರದ ಗಿಣಿಯಾಗಿ
ನೀ ನಗು ನಗುತ್ತಾ ಬಾಳು
ನಿನ್ನವಳ ಪ್ರೀತಿಗೆ
ನೀ ಮುಳುವಾಗದೆ

ನನ್ನ ಗೆಳಯ‌ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ನಿನ್ನ ಪ್ರೀತಿ ಪ್ರೇಮದ
ಮಾಯಾ ಜಿಂಕೆ ಕುಣಿ
ಕುಣಿದಾಡುತ್ತಿದೆ
ನಿನ್ನ ನೆನಪು ಮರೆತು
ನೀ ಮರುಗದೆ ಕೊರಗದೆ
ನೀ ವನದ ನವಿಲಿನಂತೆ
ಗರಿ ಬಿಚ್ಚಿ ನಲಿ ನಲಿದಾಡು
ನಿನ್ನ ಮನದ ನೋವು ಮರೆತು

ನನ್ನ ಗೆಳಯ‌ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
ನಿನ್ನ ಪ್ರೀತಿ ಪ್ರೇಮದ
ನಿನ್ನವಳ ಹೃದಯ
ನಿನ್ನಿಂದ ದೂರವಾದರು
ನೀ ಕೊಟ್ಟ ಪ್ರೀತಿ ಪ್ರೇಮವ
ಮುತ್ತು ಮರೆತು
ಬದುಕದು ನಿನ್ನವಳ ಜೀವಾ
ನಿನ್ನೆದೆಯ ನಿನ್ನೊಲವಿನ
ಸೊಜಿಗದ ಸೂಜಿ ಮಲ್ಲಿಗೆ
ದುಂಡು ಮಲ್ಲಿಗೆ
ಮುದುಡಿ ಬಾಡಿ ಹೋಗದಿರಲಿ
ನಗು ನಗುತಾ ಬದುಕಿ
ಬಾಳಲಿ ನಿನ್ನೊಲುಮೆ ಹೂವು

ನನ್ನ ಗೆಳಯ‌ ನನ್ನ ಗೆಳೆಯ
ನೀ ಯಾಕೆ ಹಿಂಗದೆ
ಪ್ರೀತಿ ಪ್ರೇಮವ ಮಾಡಿ
ದೂರವಾದೆ ನಮ್ಮಿಂದ
*********ರಾಜು ಹಾಸನ*********

- ರಾಜು ಹಾಸನ

02 Dec 2020, 09:18 pm
Download App from Playstore: