ಆಗದು!
ಆಗದು!
ಕುಂಕುಮವಿಲ್ಲದ ಹಣೆಯ
ಬಳೆಗಳಿಲ್ಲದ ಕೈಯ
ಹೂವಿಲ್ಲದ ಮುಡಿಯ
ಎಂದೂ ನೋಡಲಾಗದು
ಉಪ್ಪಿಲ್ಲದ ಅಡುಗೆಯ
ಪ್ರೀತಿಯಿಲ್ಲದ ಮಡದಿಯ
ಎಲೆ ಇಲ್ಲದ ಅಡಿಕೆಯ
ಎಂದೂ ಸ್ವೀಕರಿಸಲಾಗದು
ರುಚಿಯಿಲ್ಲದ ಹಣ್ಣನು
ಸತ್ವಯಿಲ್ಲದ ಮಣ್ಣನು
ಗುಣವಿಲ್ಲದ ಹೆಣ್ಣನು
ಎಂದೂ ಪಡೆಯಲಾಗದು
ದೇವರಿಲ್ಲದ ಗುಡಿಯನು
ಮಕ್ಕಳಿಲ್ಲದ ಮನೆಯನು
ತಾಯಿಯಿಲ್ಲದ ತವರನು
ಎಂದೂ ನೋಡಲಾಗದು
ಸಮುಖ
- sabitha
02 Dec 2020, 09:32 pm
Download App from Playstore: