ಸಹವಾಸ
ಪುಟಗಳಲ್ಲಿ ಬರೆದಿರುವೆ ಇತಿಹಾಸ
ಆ ಪುಟಗಳೆಲ್ಲ ನಿನಗಾಗಿ ಮಾಡಿರುವೇ ಸಾಹಸ
ಎಷ್ಟೋ ಹೋತ್ತುಗಳು ಕಳೆದವು ಉಪವಾಸ,
ಎಷ್ಟೋ ವರ್ಷಗಳು ಉರುಳಿದವು ವನವಾಸ
ಬಿಟ್ಟೆ ಎಲ್ಲಾ ಸ್ನೇಹಿತರ ಸಹವಾಸ,
ದಾರಿಯುದ್ದಕ್ಕೂ ಬರಿ ಅಲೆಮಾರಿ ವಾಸ
ಆಸೆ ಎಂಬ ಬುತ್ತಿಯಲ್ಲಿ ಕಟ್ಟಿರುವೆ ನೂರಾರು ಕನಸ,
ಆದರು ಅಂಕೆ ಶಂಕೆಯಲ್ಲಿ ಇಡಲಾಗುತ್ತಿಲ್ಲ ಮನಸ್ಸ
ಸದಾ ನಾ ನಿನ್ನ ಧ್ಯಾನಿಸುವ ದಾಸ,
ನಿನ್ನ ಸ್ಮರಿಸಿದ ಕೂಡಲೇ ಮನಸ್ಸಿಗೆ ಬಹಳ ಸಂತಸ
ಹೇಗೆ ಬಣ್ಣಿಸಲಿ ಆ ನಿನ್ನ ಚಿತ್ತಾರ,ಆಕಾರ ಸೊಗಸ,
ಕಂಡ ಕ್ಷಣವೇ ನಿನ್ನ ಏನೊ ಒಂತಾರ ಉಲ್ಲಾಸ
ಕನಸ್ಸಿನಲ್ಲೂ ಕಾಣುವೆ ನಿನ್ನ ಜೊತೆ ಸರಸ,
ನೀನು ದೂರವಗೊ ರೀತಿ ನೆನೆದರೆ ಬುಗಿಲೆಳುವುದು ದ್ವೇಷ
ನಿನ್ನ ನೆನಪುಗಳೇ ನಿತ್ಯ ನೀಡುವುದು ಮಂದಹಾಸ,
ಆ ಮಂದಹಾಸದಿ ಮರೆಯಾಗಿರುವುದು ಆಕಾಸ
ಹೇಳಿ ಕೇಳಿ ನಾನೋಬ್ಬ ಕಂಸ,
ಈ ಕಂಸನಲ್ಲೂ ನೀನು ಸೃಷ್ಟಿಸಿರುವೆ ವಿರಸ
ನಮ್ಮಿಬ್ಬರ ಬಂಧವು ಗೋಪುರ ಕಳಸ,
ಯಾರು ಮಾಡಲಾಗುವುದಿಲ್ಲ ದ್ವಂಸ
ಮಾಡಲು ಬಯಸದಿರು ನನಗೆ ನೀನು ಮೋಸ,
ಇತಿಹಾಸದ ಪುಟಗಳಲ್ಲಿ ನಾನೆ ನಿನ್ನ ಅರಸ!
- Shivakumara S
02 Dec 2020, 09:53 pm
Download App from Playstore: